#Exclusive NewsTop Newsಮನರಂಜನೆರಾಜ್ಯಸಿನಿಮಾಸುದ್ದಿ

ಜನವರಿ 20ರ ನಂತರ ‘ಡೆವಿಲ್’ ಚಿತ್ರದ ಶೂಟಿಂಗ್ ….!

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದರು. ಇವರ ಬಂಧನ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಪ್ರಕರಣದಲ್ಲಿ ಆರು ತಿಂಗಳ ಬಳಿಕ ದರ್ಶನ್ ಅವರು ಜಾಮೀನು ಪಡೆದಿದ್ದಾರೆ. ಅವರು ಸದ್ಯ ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿ ತಮ್ಮ ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇದು ಒಂದು ಸಿಹಿ ಸುದ್ದಿ ಆದರೆ, ಇನ್ನೊಂದು ಸಿಹಿ ಸುದ್ದಿ ಕೂಡ ಇದೆ. ಅದುವೇ ‘ಡೆವಿಲ್’ ಸಿನಿಮಾದ ಶೂಟಿಂಗ್ ವಿಚಾರ.

ದರ್ಶನ್ ಜೈಲು ಸೇರುವುದಕ್ಕೂ ಮೊದಲೇ ಒಪ್ಪಿಕೊಂಡ ಚಿತ್ರ ‘ಡೆವಿಲ್’. ಈ ಸಿನಿಮಾದ ಶೂಟಿಂಗ್ ಕೂಡ ಕೊಂಚ ಕಂಪ್ಲೀಟ್ ಆಗಿತ್ತು. ಆದರೆ, ದರ್ಶನ್ ಬಂಧನದ ಬಳಿಕ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ನಿಂತು ಹೋಗಿತ್ತು. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ.

ಸಂಕ್ರಾಂತಿ ಹಬ್ಬ ಮುಗಿದ ಬಳಿಕ ಅಂದರೆ ಜನವರಿ 20ರ ನಂತರ ‘ಡೆವಿಲ್’ ಚಿತ್ರದ ಶೂಟಿಂಗ್ ಮತ್ತೆ ಆರಂಭ ಆಗಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಕೆಲಸ ಮಾಡುವ ತಾಂತ್ರಿಕ ವರ್ಗದವರಿಗೆ ಈ ಕುರಿತು ಸಂದೇಶ ರವಾನೆ ಆಗಿದೆ ಎನ್ನಲಾಗಿದೆ. ಈ ವಿಚಾರ ಕೇಳಿ ಡಿ ಬಾಸ್ ಅಭಿಮಾನಿಗಳು ಸಂಭ್ರಮಿಸೋದು ಪಕ್ಕಾ.

Comments (0)

Your email address will not be published. Required fields are marked *

Back to top button