Top Newsದೇಶ/ವಿದೇಶಸುದ್ದಿ

ತೆಲಂಗಾಣ ಪೊಲೀಸರಿಂದ ಎನ್​ಕೌಂಟರ್ 7 ಮಾವೋವಾದಿಗಳ ಹತ್ಯೆ

ಹೈದರಾಬಾದ್: ತೆಲಂಗಾಣದ  ಮುಲುಗು  ಜಿಲ್ಲೆಯಲ್ಲಿ ಮುಂಜಾನೆ ಪೊಲೀಸರು ಹಾಗೂ ಮಾವೋವಾದಿಗಳ  ಮಧ್ಯೆ ನಡೆದ ಎನ್‌ಕೌಂಟರ್‌ನಲ್ಲಿ 7 ಮಂದಿ ಮಾವೋವಾದಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪೊಲೀಸರು ಭಾರಿ ಯಶಸ್ಸು ಗಳಿಸಿದ್ದಾರೆ. ಏಳು ಮಂದಿ ಭೀಕರ ನಕ್ಸಲೀಯರನ್ನು ತಟಸ್ಥಗೊಳಿಸಿದ್ದಾರೆ ಎಂದು  ತಿಳಿಸಿದ್ದಾರೆ. ಮುಲುಗು ಎಸ್ಪಿ ಡಾ.ಶಬರೀಶ್, ಏತೂರುನಗರಂ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಹೇಳಿದ್ದಾರೆ.

ಚಲ್ಪಾಕ ಅರಣ್ಯದಲ್ಲಿ ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಗ್ರೇಹೌಂಡ್ಸ್ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಮಾವೋವಾದಿ ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶಿಸಿತ್ತು. ಈ ಸಂದರ್ಭ ಮಾವೋವಾದಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ಸುರಿಮಳೆ ಸುರಿಸಿದ್ದಾರೆ. ಪರಿಣಾಮ 7 ಮಂದಿ ಮಾವೋವಾದಿಗಳು ಹತರಾಗಿದ್ದಾರೆ.

ಘಟನಾ ಸ್ಥಳದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ 47 ರೈಫಲ್‌ಗಳು ಸೇರಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ ಒಬ್ಬನನ್ನು ನಿಷೇಧಿತ ಸಿಪಿಐ  ತೆಲಂಗಾಣ ರಾಜ್ಯ ಸಮಿತಿಯ  ಕಾರ್ಯದರ್ಶಿ ಕುರ್ಸಮ್ ಮಂಗು ಅಲಿಯಾಸ್ ಭದ್ರು ಎಂದು ಗುರುತಿಸಲಾಗಿದೆ.

 

Comments (0)

Your email address will not be published. Required fields are marked *

Back to top button