Top Newsರಾಜಕೀಯಸುದ್ದಿ

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮುನ್ನಡೆ ಸಾಧಿಸುತ್ತಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುರಿತು ಉಪಮುಖ್ಯಮಮತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿದ್ದಾರೆ. ಎಪಿಬಿ  ಸಂದರ್ಶನದಲ್ಲಿ ಮಾತನಾಡಿದ ಅವರು, ನಾವ್ಯಾರೂ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಇದು ನಮ್ಮ ನಿರೀಕ್ಷೆಗಳನ್ನು ಮೀರಿದೆ. ಒಂದೂವರೆ ಗಂಟೆಯ ನಂತರ ಮೂರೂ ಪಕ್ಷಗಳು ಕುಳಿತು ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸಲಿವೆ.

ಪಕ್ಷದ ಕಚೇರಿಗೆ ಹೋಗುತ್ತೇನೆ ಬಳಿಕ ನಾಗ್ಪುರಕ್ಕೆ ಹೋಗುತ್ತೇನೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ನಾಳೆ ಮಹಾಯುತಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ನವೆಂಬರ್ 25 ರಂದು ಅವರು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಮತ್ತು ನವೆಂಬರ್ 26 ರಂದು ಸರ್ಕಾರ ರಚನೆಯಾಗಲಿದೆ. ಮಹಾರಾಷ್ಟ್ರ ವಿಧಾನಸಭೆಯ ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ ನೇತೃತ್ವದ ಮಹಾಮೈತ್ರಿಕೂಟ ಬಹುಮತದ ಗಡಿ ದಾಟಿದೆ. ಬಿಜೆಪಿ ನೇತೃತ್ವದ ಮಹಾಯುತಿ 217 ಸ್ಥಾನಗಳಲ್ಲಿ ಮುಂದಿತ್ತು, ಕಾಂಗ್ರೆಸ್ ನೇತೃತ್ವದ ಎಂವಿಎ 58 ಸ್ಥಾನಗಳಲ್ಲಿ ಮತ್ತು ಇತರರು 13 ಸ್ಥಾನಗಳಲ್ಲಿ ಮುಂದಿದ್ದರು.

 

 

Comments (0)

Your email address will not be published. Required fields are marked *

Back to top button