Top Newsಸಿನಿಮಾಸುದ್ದಿ

ಇನ್ನೆರಡು ದಿನಗಳಲ್ಲಿ ನಟ ದರ್ಶನ್​ಗೆ ಸರ್ಜರಿ: ಹೈಕೋರ್ಟ್ ದೀರ್ಘ ವಿಶ್ರಾಂತಿಗೆ ಅವಕಾಶ ನೀಡಬಹುದಾ?

ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನ ಕಾರಣಕ್ಕೆ ಜೈಲಿನಿಂದ ಹೊರ ಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇದ್ದ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯತೆ ಇದೆ ಕೋರ್ಟ್​ಗೆ ಮನವರಿಕೆ ಮಾಡಿಕೊಡಲಾಯಿತು. ಹೀಗಾಗಿ, ಕರ್ನಾಟಕ ಹೈಕೋರ್ಟ್ ಅವರಿಗೆ ಆರು ವಾರಗಳು ಮಧ್ಯಂತರ ಜಾಮೀನು ನೀಡಿದೆ. ಈಗ ದರ್ಶನ್ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ದರ್ಶನ್ ಅವರ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ನಡೆಯೋಕೂ ಸಾಧ್ಯ ಆಗುತ್ತಿರಲಿಲ್ಲ. ಅವರ ಕಾಲು ಕೂಡ ವೀಕ್ ಆಗಿದೆ ಎಂದು ವೈದ್ಯರು ಹೇಳಿದ್ದರು. ನಿರಂತರವಾಗಿ ಅವರನ್ನು ಪರೀಕ್ಷಿಸಿರುವ ವೈದ್ಯರು, ಸರ್ಜರಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದಾದ ಬಳಿಕ ಅವರಿಗೆ ರಿಲೀಫ್ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಆರೋಗ್ಯದ ಹಿತದೃಷ್ಟಿಯಿಂದ ಸರ್ಜರಿ ಸೂಕ್ತ ಎಂದಿರುವ ವೈದ್ಯರು ಹೇಳಿದ್ದಾರೆ. ಹೀಗಾಗಿ ದರ್ಶನ್​ಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರ ತಂಡ ಮುಂದಾಗಿದೆ. ಒಂದೆರಡು ದಿನಗಳಲ್ಲಿ ದರ್ಶನ್​ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ದರ್ಶನ್​​ಗೆ ಸರ್ಜರಿ ನಡೆಸಲು ಪತ್ನಿ ವಿಜಯಲಕ್ಷ್ಮೀ ಸಮ್ಮತಿ ನೀಡಿದ್ದಾರೆ.

ಬೆನ್ನುಹುರಿ ಶಸ್ತ್ರಚಿಕಿತ್ಸೆ ಎಂದರೆ ಅದು ತುಂಬಾನೇ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿದೆ. ಸರ್ಜರಿ ಬಳಿಕ ವೈದ್ಯರು ದರ್ಶನ್​ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುವ ಸಾಧ್ಯತೆ ಇದೆ. ವೈದ್ಯರು ಎಷ್ಟು ದಿನ ದರ್ಶನ್​ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ದರ್ಶನ್​ ಜೈಲಿನಿಂದ ಹೊರ ಬಂದು ವಾರ ಕಳೆದಿದೆ. ಅವರ ಬಳಿ ಇನ್ನು ಐದು ವಾರಗಳು ಮಾತ್ರ ಉಳಿದಿವೆ. ಇದಾದ ಬಳಿಕ ಅವರು ಮರಳಿ ಜೈಲು ಸೇರಬೇಕಿದೆ.

Comments (0)

Your email address will not be published. Required fields are marked *

Back to top button