Tuesday, June 24, 2025
26.6 C
Bengaluru
Google search engine
LIVE
ಮನೆ#Exclusive Newsಪ್ರಧಾನಿ ನರೇಂದ್ರ ಮೋದಿ ತವರಲ್ಲಿ ನಕಲಿ ಕೋರ್ಟ್ ಪತ್ತೆ!

ಪ್ರಧಾನಿ ನರೇಂದ್ರ ಮೋದಿ ತವರಲ್ಲಿ ನಕಲಿ ಕೋರ್ಟ್ ಪತ್ತೆ!

ಅಹಮದಾಬಾದ್: ಪೊಲೀಸರ ಸೋಗಿನಲ್ಲಿ ದಾಳಿನಡೆಸುವುದು, ವೈದ್ಯರರೀತಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಪತ್ರ ಕರ್ತರಂತೆ ಪೋಸು ನೀಡುವುದು, ಸರ್ಕಾ ರಿ ಅಧಿಕಾರಿಯೆಂದು ನಂಬಿಸಿ ಹಣ ಪೀಕುವುದನ್ನು ಮಾಡುವಂತಹ ನಕಲಿಗಳನ್ನು ಸಾಕಷ್ಟು ಬಾರಿ ನೋಡಿಯೇ ಇರುತ್ತೀರಿ. ಆದರೆ ಗುಜರಾತಿನಲ್ಲಿ ಅದೆಲ್ಲದಕ್ಕಿಂತ ಭಿನ್ನವಾದ ಸುದ್ದಿಯೊಂದು ವರದಿಯಾಗಿದೆ. ಅದೇನೆಂದರೆ, ನಕಲಿ ನ್ಯಾಯಾಲಯ! ಹೌದು. ಈ ನ್ಯಾಯಾಲಯದಲ್ಲಿ ತೀರ್ಪು ನೀಡುವವರು ನಕಲಿ ನ್ಯಾಯಾಧೀಶ. ಅಲ್ಲಿ ಕಾರ್ಯನಿರ್ವಹಿಸುವವರೆಲ್ಲಾ ನಕಲಿ ಸಿಬ್ಬಂದಿ!ತಾನು ನ್ಯಾಯಾಲಯದಿಂದ ನೇಮಕವಾದ ‘ಮಧ್ಯಸ್ಥಿಕೆದಾರ’ ಎಂದು ಸುಳ್ಳು ಹೇಳಿ 5 ವರ್ಷಗಳಿಂದ ನಕಲಿ ನ್ಯಾಯಾಲಯ ನಡೆಸುತ್ತಿದ್ದ ಮಾರಿಸ್ ಸ್ಯಾಮ್ಯುಯುಲ್ ಕ್ರಿಸ್ಟಿಯನ್ (37) ಎಂಬ ವ್ಯಕ್ತಿಯನ್ನು ಗುಜರಾತ್‌ನ ಅಹ ಮದಾಬಾದ್ ಪೊಲೀಸರು ಇದೀಗ ಬಂಧಿಸಿದ್ದಾರೆ. ಈಗ ನಕಲಿ ನ್ಯಾಯಾಧೀಶ ಅಸಲಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾನೆ.

ಕಾರ್ಯನಿರ್ವಹಣೆ ಹೇಗೆ?: ಅಹಮದಾಬಾದ್ ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ಬರುತ್ತಿದ್ದ ಭೂವ್ಯಾಜ್ಯ ಸಂಬಂಧಿ ವ್ಯಕ್ತಿಗಳನ್ನು ಗುರುತಿಸಿ ಅವರೊಂದಿಗೆ ಮಾರಿಸ್ ಡೀಲ್ ಕುದುರಿಸುತ್ತಿದ್ದ. ‘ನಾನು ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ. ನಿಮಗೆ ಬೇಕಾದ ರೀತಿ ತೀರ್ಪು ನೀಡುವೆ’ ಎಂದು ಹೇಳಿ ಅವರಿಂದ ಹಣ ಪಡೆಯುತ್ತಿದ್ದ. ಬಳಿಕ ಯಾರಿಗೂ ಸಂದೇಹ ಬರಬಾರದು ಎಂಬ ಕಾರಣಕ್ಕೆ ಕೋರ್ಟ್‌ನಿಂದ ದೂರ ಇರುವ ಕಟ್ಟಡವನ್ನು ನ್ಯಾಯಾಲಯವಾಗಿ ರೂಪಾಂತರಿಸಿದ್ದ. ಆ ಚೇಂಬರ್ ಅನ್ನು ಕೋರ್ಟ್ ಚೇಂಬರ್‌ಗಳನ್ನೂ ನಾಚಿಸುವಂತೆ ನಿರ್ಮಿಸಿದ್ದ. ‘ನಾನು ಮಧ್ಯಸ್ಥಿಕೆದಾರ ಆದ ಕಾರಣ ನನಗೆ ಬೇರೆ ಕಟ್ಟಡವನ್ನು ಕರ್ತವ್ಯ ನಿರ್ವಹಣೆಗೆ ನೀಡಲಾಗಿದೆ’ ಎಂದು ಕಕ್ಷಿದಾರರನ್ನು ನಂಬಿಸುತ್ತಿದ್ದ ಹಾಗೂ ಆ ‘ಕಚೇರಿ’ಗೆ ಅವರನ್ನು ಕರೆಸಿಕೊಳ್ಳುತ್ತಿದ್ದ. ಅಲ್ಲಿ ಮಾರಿಸ್ ಜಡ್ಜ್ ಪಾತ್ರ ವಹಿಸಿದರೆ, ಆತನ ಇತರೆ ಆಪ್ತರು ಕೋರ್ಟ್ ಸಿಬ್ಬಂದಿ ಮತ್ತು ವಕೀಲರ ರೀತಿ ನಾಟಕ ಆಡುತ್ತಿದ್ದರು. ಅಲ್ಲಿ ಮಾರಿಸ್ ಕೆಲವು ದಿನ ವಿಚಾರಣೆ ನಾಟಕ ಆಡಿ ಬಳಿಕ ಹಣ ಪಡೆದವರ ಪರ ನಕಲಿ ಆದೇಶ ಹೊರಡಿಸುತ್ತಿದ್ದ. ಈತನ ಬಣ್ಣ ಬಯಲಾಗಿದ್ದು ಹೇಗೆ?: ಇತ್ತೀಚೆಗೆ ಭೂವ್ಯಾಜ್ಯ ಪ್ರಕರಣವೊಂದರ ಬಗ್ಗೆ ಇದೇ ರೀತಿ ನಕಲಿ ಆದೇಶ ಹೊರಡಿಸಿದ್ದ. ಯಾವುದೇ ಕೋರ್ಟ್ ಆದೇಶ ಇದ್ದರೂ ಅದರ ಜಾರಿಗೆ ಆದೇಶ ಪತ್ರ ಬೇಕೇ ಬೇಕು. ಹೀಗಾಗಿ ತನ್ನ ನಕಲಿ ಆದೇಶದ ಪ್ರತಿ ಇಟ್ಟುಕೊಂಡು ಅಸಲಿ ವಕೀಲರ ಮೂಲಕ ಕೋರ್ಟ್‌ನಿಂದ ‘ಆದೇಶ ಜಾರಿ ಪತ್ರ’ ಪಡೆಯಲು ಮುಂದಾಗಿದ್ದ. ಆದರೆ ಕೋರ್ಟ್‌ನ ರಿಜಿಸ್ಟ್ರಾರ್‌ಗೆ, ‘ಮಾರಿಸ್‌ ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಅಲ್ಲ. ಇಂಥವರನ್ನು ನಾವು ಯಾವತ್ತೂ ನೇಮಿಸಿಕೊಂಡಿಲ್ಲ’ ಎಂబ ವಿಷಯ ಅರಿವಿಗೆ ಬಂತು. ಹೀಗಾಗಿ ಆತನ ವಿರುದ್ದ ದೂರು ದಾಖಲಿಸಿದರು. ಈ ಹಿನ್ನೆಲೆ ಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಿತ್ರವೆಂದರೆ ಇದು ಮಾರಿಸ್ ಮೇಲೊನ ಮೊದಲ ಪ್ರಕರಣವಲ್ಲ. 2015ರಲ್ಲಿ ಈತ ವಂಚನೆ ಕೇಸಿನಲ್ಲಿ ಬಂಧಿಯಾಗಿ ಬಿಡುಗಡೆ ಆಗಿದ್ದ. ನಂತರ ನಕಲಿ ನ್ಯಾಯಾಧೀಶನಾಗಿ ದಂಧೆ ಆರಂಭಿಸಿದ್ದ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments