#Exclusive NewsTop Newsಫ್ರೀಡಂ ಟಿವಿ ವಿಶೇಷರಾಜಕೀಯವಿಶೇಷವೈರಲ್ ನ್ಯೂಸ್ಸುದ್ದಿ

ಕಾಶ್ಮೀರ ವಿಧಾನಸಭಾ ಚುನಾವಣೆ ಮುಕ್ತಾಯ:ಶಾಂತಿಯುತವಾಗಿ ನಡೆದ ಮತದಾನ ಪ್ರಕ್ರಿಯೆ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 3ನೇ ಹಂತದ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಕಡೆಯ ಹಂತದ ಈ ಚುನಾವಣೆಯಲ್ಲಿ ಶೇ. 68.72ರಷ್ಟುಮತದಾನವಾಗಿದೆ.ಇದರೊಂದಿಗೆ ರಾಜ್ಯ ವಿಧಾನಸಭೆಗೆ ನಿಗದಿಯಾಗಿದ್ದ ಮೂರು ಹಂತದ ಮತದಾನ ಮುಕ್ತಾಯವಾದಂತೆ ಆಗಿದ್ದು, ಒಟ್ಟಾರೆ ಶೇ.63.45 ರಷ್ಟು ಮತದಾನ ದಾಖಲಾಗಿದೆ. ಇದು ಕಳೆದ ಚುನಾವಣೆಯ ಪ್ರಮಾಣಕ್ಕಿಂತ ಕಡಿಮೆ. ಅ.8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಮಂಗಳವಾರ 40 ವಿಧಾನಸಭಾ ಕ್ಷೇತ್ರಗಳಿಗೆ
ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆಯಿತು. ಈ ಪ್ರಕ್ರಿಯೆ ಪೂರ್ಣ ಶಾಂತಿಯುತವಾಗಿತ್ತು. ಜನತೆ ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು ಕಂಡುಬಂತು. ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾ ನವನ್ನು 2019ರಲ್ಲಿ ರದ್ದುಪಡಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.

ಸುಗಮ ಮತದಾನವನ್ನು ಖಚಿತಪಡಿಸಿಕೊಳ್ಳಲು ಅರೆಸೈನಿಕ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿ ಸೇರಿದಂತೆ 400 ಕ್ಕೂ ಹೆಚ್ಚು ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಹಿಂದಿನ ಹಂತಗಳಲ್ಲಿ ಮತದಾನದ ಪ್ರಮಾಣವು ಪ್ರಬಲವಾಗಿತ್ತು, ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದಲ್ಲಿ 61.38% ಮತ್ತು ಸೆಪ್ಟೆಂಬರ್ 26 ರಂದು ನಡೆದ ಎರಡನೇ ಹಂತದಲ್ಲಿ 57.31% ಭಾಗವಹಿಸುವಿಕೆ ದಾಖಲಾಗಿದೆ.

Comments (0)

Your email address will not be published. Required fields are marked *

Back to top button