Top Newsಸಿನಿಮಾಸುದ್ದಿ

ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ-ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟುಗೊತ್ತಾ?

ಕನ್ನಡದ ಸ್ಟಾರ್ ನಟ ಸುದೀಪ್‌ ಬೇಡಿಕೆ ನಟನಾಗಿ ಬಹುಭಾಷೆಗಳಲ್ಲಿ ನಟಿಸಿ ಸದ್ದು ಮಾಡುತ್ತಿದ್ದಾರೆ.  ಇಂದಿಗೂ ಸುದೀಪ್ ನಟನೆ ಮತ್ತು ನಿರೂಪಣೆಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವು ಹೊಂದಿದ್ದಾರೆ. ಇದರ ನಡುವೆ ನಟ ಇಂಟರೆಸ್ಟಿಂಗ್‌ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ. ಬಿಗ್ ಬಾಸ್ 10 ಸೀಸನ್ ಮುಗಿಸಿ 11ನೇ ಸೀಸನ್‌ಗೆ ಲಗ್ಗೆ ಇಡುತ್ತಿರುವ ಕಾರ್ಯಕ್ರಮಕ್ಕೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು? ಎಂಬುದರ ಬಗ್ಗೆ ನಟ ತಿಳಿಸಿದ್ದಾರೆ.

ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಈ ಶೋಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಕುರಿತು ನಟನಿಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ನಟ ಪ್ರತಿಕ್ರಿಯಿಸಿ, ನನ್ನ ತಟ್ಟೆ ಎಷ್ಟು ಅಗಲ ಇದೆಯೋ ನಾನಷ್ಟು ಊಟ ಮಾಡುತ್ತೇನೆ. ನನಗೆ ಯೋಗ್ಯತೆ ಎಷ್ಟು ಇದೆಯೋ ನಾನಷ್ಟೇ ದುಡಿಯೋದು ಎಂದಿದ್ದಾರೆ. ಇದು ನನ್ನ ಹೊಸ ಅಧ್ಯಾಯ ಎಂದು ಸುದೀಪ್ ನಕ್ಕಿದ್ದಾರೆ. ಅಂದಹಾಗೆ, ಸೆ.29ರಂದು ಸಂಜೆ 6ಕ್ಕೆ ಗ್ರ‍್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಕಿಚ್ಚನ ನಯಾ ಖದರ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

ಬಿಗ್ ಬಾಸ್ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Comments (0)

Your email address will not be published. Required fields are marked *

Back to top button