ಪ್ರಧಾನಿ ಮೋದಿ ಅಮೆರಿಕ ಭೇಟಿ: ಕಳ್ಳಸಾಗಣೆಯಾಗಿದ್ದ 297 ಪ್ರಾಚೀನ ವಸ್ತುಗಳು ಭಾರತಕ್ಕೆ ವಾಪಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಕೇವಲ ರಾಜತಾಂತ್ರಿಕ ಮಾತುಕತೆ, ಮತ್ತು ಮಿಲಿಟರಿ ಒಪ್ಪಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಕಳ್ಳಸಾಗಣೆ ವಿರುದ್ಧವೂ ಯಶಸ್ಸು ಸಿಕ್ಕಿದೆ. ಐತಿಹಾಸಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಹಲವು ಪುರಾತನ ವಸ್ತುಗಳು ಕಳ್ಳಸಾಗಣೆ ಜಾಲದ ಮೂಲಕ ಅಮೆರಿಕ ಸೇರಿದ್ದವು. ಈ ಪೈಕಿ ಒಟ್ಟು 297 ಪ್ರಾಚ್ಯ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ಸಮ್ಮತಿಸಿದೆ. ಈ ಮೂಲಕ 2014ರಿಂದ ಈವರೆಗೆ 640 ಪ್ರಾಚೀನ ವಸ್ತುಗಳು ಭಾರತಕ್ಕೆ ವಾಪಸ್ ಆದಂತಾಗಿದೆ.ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದ್ದ ಪುರಾತನ ವಸ್ತುಗಳು ಕಳ್ಳಸಾಗಣೆ, ಅಕ್ರಮ ಮಾರಾಟ ಹೀಗೆ ಹಲವು ಕಾರಣಗಳಿಂದಾಗಿ ವಿಶ್ವಾದ್ಯಂತ ಹಂಚಿ ಹೋಗಿದೆ. ಈ ವಸ್ತುಗಳ ವಾಪಸಾತಿಗೆ ಮೋದಿ ಸರ್ಕಾರ ವಿಶ್ವಾದ್ಯಂತ ಹಲವು ಸರ್ಕಾರಗಳ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಅಮೆರಿಕ ಸರ್ಕಾರ ಪ್ರಮುಖ ಪಾಲುದಾರನಾಗಿ ಹೊರ ಹೊಮ್ಮಿದೆ. ಅಮೆರಿಕದ ವಿವಿಧ ಸಂಸ್ಥೆಗಳಲ್ಲಿ ಇದ್ದ 578 ಪುರಾತನ ವಸ್ತುಗಳು ಭಾರತಕ್ಕೆ ಹಿಂದಿರುಗಿವೆ.ಮನಮೋಹನ್ ಸಿಂಗ್ ಅವರ

ಆಡಳಿತಾವಧಿಯಲ್ಲಿ ಕೆವಲ ಒಂದು ಪುರಾತನ ವಸ್ತು ಬಾರತಕ್ಕೆ ವಾಪಸಾಗಿತ್ತು. ಈ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ 2014 ರಿಂದ ಈವರೆಗೆ ಭಾರೀ ಪ್ರಗತಿಯಾಗಿದೆ.2021ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ದೇಶಕ್ಕೆ ಭೇಟಿ ನೀಡಿದ್ದ ವೇಳೆ 157 ಪುರಾತನ ವಸ್ತುಗಳನ್ನು ಅಮೆರಿಕ ವಾಪಸ್ ನೀಡಿತ್ತು. ಈ ಪೈಕಿ 12 ನೇ ಶತಮಾನದ ಕಂಚಿನ ನಟರಾಜನ ಪ್ರತಿಮೆಯೂ ಸೇರಿತ್ತು. ಇಲ್ಲಿಯವರೆಗೆ ನರೇಂದ್ರ ಮೋದಿ ಅವರಿಗೆ 105 ಕಲಾಕೃತಿಗಳನ್ನು ಅಮೆರಿಕ ಹಿಂದಿರುಗಿತ್ತು. ಕಳ್ಳತನದ ಮೂಲಕ ಭಾರತದ ಸಾಂಸ್ಕೃತಿಕ ಆಸ್ತಿಗಳನ್ನು ವಿದೇಶಕ್ಕೆ ಸಾಗಿಸಲಾಗಿತ್ತು. ಇವುಗಳನ್ನು ಮರಳಿ ಸ್ವದೇಶಕ್ಕೆ ತರಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಪ್ರತಿಫಲ ಇದಾಗಿದೆ.





