Top News

ಹೆಡ್​ಲೈನ್ ಮಾಸ್ತರ್ ಎಂದೇ ಪರಿಚಿತರಾಗಿದ್ದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ನಿಧನ

ಬೆಂಗಳೂರು :  ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ  ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ 3.13ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದರು. ಡಿ.ಉಮಾಪತಿಯವರು ಸಂಪಾದಕರಾಗಲು ಮನಸ್ಸು ಮಾಡದಿದ್ದಾಗ ನಾಡಿಗೇರ್ ಅವರಿಗೆ ಈ ಅವಕಾಶ ದೊರಕಿತ್ತು. ಅವರು ಮೂಲತಃ ರಾಣೆಬೆನ್ನೂರಿನವರು.

ಕನ್ನಡಪ್ರಭ, ವಿಜಯ ಕರ್ನಾಟಕ, ವಿಶ್ವವಾಣಿ ಸೇರಿದಂತೆ ಇದರ ಪತ್ರಿಕೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.

ಪತ್ರಿಕೋದ್ಯಮದಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ವಸಂತ ನಾಡಿಗೇರ ಅವರು ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಪನ್ ಹೆಡ್ಡಿಂಗ್‌ಗಳ ಮೂಲಕವೇ ಸುದ್ದಿ ಮನೆಗಳಲ್ಲಿ ಜನಪ್ರಿಯರಾಗಿದ್ದರು.

Comments (0)

Your email address will not be published. Required fields are marked *

Back to top button