ರಾಜಕೀಯರಾಜ್ಯಸುದ್ದಿ

ಬಿಜೆಪಿ ಎಮ್​ಎಲ್​ಸಿ ಯೋಗೇಶ್ವರ್​ ಪುತ್ರಿ ನಿಶಾಗೆ ಕಾಂಗ್ರೆಸ್​ ನಶೆ!

ಬೆಂಗಳೂರು : ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವ‌ರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಸ್ವತಃ ನಿಶಾ ಯೋಗೇಶ್ವ‌ರ್ ಅವರೇ ಖಾಸಗಿ ತಾವು ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಇದಕ್ಕೆ ತಮ್ಮ ತಂದೆಯ ಸಹಮತ ಕೂಡ ಇದೆ. ಕಾಂಗ್ರೆಸ್ ಸೇರ್ಪಡೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದಿದ್ದಾರೆ.

ತಂದೆ ಸಿ ಪಿ ಯೋಗೇಶ್ವ‌ರ್ ಈ ಹಿಂದೆ ಕಾಂಗ್ರೆಸ್‌ ನಲ್ಲಿದ್ದರು, ನಂತರ ಬಿಜೆಪಿ ಸೇರಿದ್ದರು. ಸದ್ಯ ಬಿಜೆಪಿ ಎಂಎಲ್‌ಸಿಯಾಗಿದ್ದಾರೆ. ತಂದೆಯ ರಾಜಕೀಯ ಹಾದಿಯನ್ನು ಬಿಟ್ಟು ಭಿನ್ನ ದಾರಿಯಲ್ಲಿ ಹೋಗಲು ನಿಶಾ ಮುಂದಾಗಿದ್ದಾರೆ.


ಹಲವು ಬಾರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್‌ ಅವರನ್ನು ಭೇಟಿ ಮಾಡಿದ್ದ ನಿಶಾ ಯೋಗೇಶ್ವ‌ರ್ ಕಾಂಗ್ರೆಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಕೂಡ ಮಾಹಿತಿ ನೀಡಿದ್ದರು. ನಿಶಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಹಲವು ಬಾರಿ ಚರ್ಚಿಸಿದ್ದರು.

Comments (0)

Your email address will not be published. Required fields are marked *

Back to top button