Top News

AK Antony: ಬಿಜೆಪಿ ಗೆದ್ರೆ ದೇಶವೇ ಇರಲ್ಲ.. ಮಗನ ವಿರುದ್ಧ ತಿರುಗಿಬಿದ್ದ ಅಪ್ಪ!

ಲೋಕಸಭೆ ಚುನಾವಣೆಯಲ್ಲಿ ಸಮೀಕರಣಗಳು ಬದಲಾಗುತ್ತಿರುತ್ತವೆ. ಸಿದ್ದಾಂತ ಮತ್ತು ಅಧಿಕಾರದ ನಡುವಿನ ಸಂಘರ್ಷದಲ್ಲಿ ಅಪ್ಪ ಮಕ್ಕಲೇ ಪರಸ್ಪರ ವಿರುದ್ಧ ನಿಲ್ಲುವ ಸನ್ನಿವೇಶ ಏರ್ಪಟ್ಟಿದೆ.

ಅನಾರೋಗ್ಯದಿಂದ ಬಳಲ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಈ ಲೋಕಸಭೆ ಚುನಾವಣೆಯನ್ನು ತುಂಬಾ ಗಂಭೀರವಾದುದು ಎಂದು ಬಣ್ಣಿಸಿದ್ದಾರೆ. ದೇಶದ ಪಾಲಿಗೆ ಇದು ಮಾಡು ಇಲ್ಲವೇ ಇಡಿ ಸನ್ನಿವೇಶ ಎಂದು ಏಕೆ ಆಂಟನಿ ವ್ಯಾಖ್ಯಾನಿಸಿದ್ದಾರೆ.

ಇದು ಕೇವಲ ಚುನಾವಣೆ ಅಲ್ಲ.. ಇದು ದೇಶದ ಉಳಿವಿಗಾಗಿ ನಡೆಯಬೇಕಾದ ಜನಮತಗಣನೆ.. ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಜಿಸಿದ್ದಾರೆ. ಇಡೀ ದೇಶದ ವ್ಯವಸ್ಥೆಯನ್ನು ನಾಶ ಮಾಡಲು, ಬುಡಬೇಲು ಮಾಡಲು ಹೊರಟಿರುವ ಬಿಜೆಪಿ ವಿರುದ್ಧ  ಹೋರಾಟ ಮಾಡಲು ನಾನು ಅನಾರೋಗ್ಯದ ನಡುವೆಯೂ ಸಿದ್ದ ಇದ್ದೇನೆ. ಮತ್ತೊಮ್ಮೆ ಏನಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೇಶ, ಸಂವಿಧಾನ, ಮೂಲಭೂತ ಹಕ್ಕುಗಳಿಗೆ ಕಂಟಕ ಎದುರಾಗಲಿದೆ.. ಇದು ಆಗಬಾರದು ಎಂದು ಏ.ಕೆ ಆಂಟನಿ ಹೇಳಿದ್ದಾರೆ.

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಲು ಬಿಡಬಾರದು ಎಂಬುದು ಕಾಂಗ್ರೆಸ್​ ಗುರಿಯಾಗಬೇಕು.. ಒಂದೊಮ್ಮೆ ಈ ಪ್ರಯತ್ನದಲ್ಲಿ ಕಾಂಗ್ರೆಸ್ ವಿಫಲವಾದಲ್ಲಿ ದೇಶವೇ ಇರಲ್ಲ. ನಮ್ಮ ಗುರಿ ಏನಿದ್ದರೂ ಭಾರತವನ್ನು ರಕ್ಷಿಸಿಕೊಳ್ಳುವುದಾಗಬೇಕು.. ಸೋ ಇದು ನಮಗೆ ಮಾಡು ಇಲ್ಲವೇ ಮಡಿ ಸನ್ನಿವೇಶ ಎಂದು ಏ.ಕೆ ಆಂಟನಿ ವ್ಯಾಖ್ಯಾನಿಸಿದ್ದಾರೆ.

ಇದೇ ವೇಳೆ, ಪುತ್ರ ಅನಿಲ್ ಆಂಟನಿ ಬಿಜೆಪಿಯಿಂದ ಪಟ್ಟಣತಿಟ್ಟ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಶ್ನೆ ಏ.ಕೆ ಆಂಟನಿಗೆ ಎದುರಾಯ್ತು. ಇದಕ್ಕೆ ಉತ್ತರಿಸಿದ ಅವರು,ನನ್ನ ಆರೋಗ್ಯದ ಇತಿಮಿತಿಯಲ್ಲಿ  ಬಿಜೆಪಿ ವಿರುದ್ಧ ಹೋರಾಡುತ್ತೇನೆ. ಕಲೆದ ಅಸೆಂಬ್ಲಿ ಚುನಾವಣೆಯಲ್ಲಿ ತಿರುವನಂತಪುರದಲ್ಲಿ ಕುಳಿತೇ ಹೋರಾಟ ಮಾಡಿದ್ದೇ. ಈಗಲೂ ಹಾಗೆಯೇ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿರುವ ಪುತ್ರ ಅನಿಲ್ ಆಂಟನಿ ವಿರುದ್ಧ ಹೋರಾಟ ನಡೆಸುವ ಸುಳಿವನ್ನು ಅಪ್ಪ ಏ.ಕೆ ಆಂಟನಿ ನೀಡಿದ್ದಾರೆ.

ಏ.ಕೆ ಆಂಟನಿ.. ಮೂರು ಬಾರಿ ಕೇರಳ ಸಿಎಂ ಆಗಿದ್ದರು. ದೇಶದ ರಕ್ಷಣಾ ಮಂತ್ರಿಯಾಗಿ ಸುದರ್ಘ ಅವಧಿಗೆ ಕೆಲಸ ಮಾಡಿದ್ದರು. ಅನಾರೋಗ್ಯದ ಕಾರಣ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. 2023ರಲ್ಲಿ ಏ.ಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು

Comments (0)

Your email address will not be published. Required fields are marked *

Back to top button