Monday, June 23, 2025
26.3 C
Bengaluru
Google search engine
LIVE
ಮನೆಆರೋಗ್ಯಮಲಗಿದ್ದವರ ಮೇಲೆ ಕುಸಿದು ಬಿದ್ದ ಮನೆ ಮೇಲ್ಚಾವಣಿ

ಮಲಗಿದ್ದವರ ಮೇಲೆ ಕುಸಿದು ಬಿದ್ದ ಮನೆ ಮೇಲ್ಚಾವಣಿ

ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮಲಗಿದ್ದವರ ಮೇಲೆ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಪರಿಣಾಮ 7 ಮಂದಿ ಗಾಯಗೊಂದಿದ್ದು, ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದೆ. ಅದೃಷ್ಟವಶಾತ್ ಎಲ್ಲಾರೂ‌ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಶ್ರೀನಿವಾಸ್, ಹೇಮಶ್ರೀ, ಶಿವ, ನಾಗಮ್ಮ, ಮುನಿವೆಂಕಟಮ್ಮ ಹಾಗೂ ಮಕ್ಕಳಾದ ಮೇಘನಾ (6), ವೈಶಾಲಿ (7) ಗಾಯಾಳುಗಳು. ಕಲ್ಲು ಚಪ್ಪಡಿ ಮನೆಯ ಮೇಲ್ಚಾವಣಿ ಕುಸಿದು ತಡರಾತ್ರಿ ಈ ದುರಂತ ಸಂಭವಿಸಿದೆ. ಶ್ರೀನಿವಾಸ ಮತ್ತು ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ರು. ಬಾಲಕಿ ಮೇಘನಾ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್​ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments