Tuesday, February 10, 2026
24.4 C
Bengaluru
Google search engine
LIVE
ಮನೆ#Exclusive NewsTop Newsಪ್ರತಿಷ್ಠಿತ ಬಿಜಿಎಸ್ ಕಾಲೇಜಿನ ಕರ್ಮಕಾಂಡ

ಪ್ರತಿಷ್ಠಿತ ಬಿಜಿಎಸ್ ಕಾಲೇಜಿನ ಕರ್ಮಕಾಂಡ

ಬೆಂಗಳೂರಿನ ಪ್ರತಿಷ್ಠಿತ ಬಿಜಿಎಸ್​​​ ಕಾಲೇಜಿನಲ್ಲಿ ಉನ್ನತ ಹುದ್ದೆಯಲ್ಲಿ ಕುಳಿತವರಿಂದಲೇ ಮಹಾ ವಂಚನೆ ನಡೆದಿದೆ.. ಬಿಜಿಎಸ್ ಸ್ಕೂಲ್ , ಹೆಲ್ತ್ ಎಜುಕೇಶನ್ ಸಿಟಿಯಲ್ಲಿ ಮಹಾ ದೋಖಾ ನಡೆದಿದ್ದು, ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ.

ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೇಮಕುಮಾರ್ ರಾಜ್ ಅರಸ್, ಅಸಿಸ್ಟೆಂಟ್ ಅಕೌಂಟ್ ನಾಗೇಶ್ ಬಾಬು, ಅಸಿಸ್ಟೆಂಟ್ ಪ್ರೊಪೆಸರ್ ಗಳಾದ ಸಂದೀಪ್ , ಅರುಣ್ ಕುಮಾರ್ ವಿನಯ್ ಮೇಲೆ ದೂರು ದಾಖಲಾಗಿದೆ..
ಬಿಜಿಎಸ್ ಶಾಲೆಯ ಪ್ರಾಂಶುಪಾಲರಾದ ಮಮತ ಅವರಿಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳು ವಿದ್ಯಾರ್ಥಿಗಳಿಂದ ನಗದು ಹಾಗೂ ಬ್ಯಾಂಕ್ ಮೂಲಕ ಹಣ ಪಡೆದು ಪೂರಕವಾದ ರಸೀದಿ ಕೊಡದೆ ವಂಚನೆ ಮಾಡಿದ್ದಾರೆ..

ಜೊತೆಗೆ ಕಾಲೇಜಿನಿಂದ ಅನುಮತಿ ಹಾಗೂ ಎನ್ ಓ ಸಿ ಪಡೆಯದೆ ಗೈರಾಗಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.. ಆರೋಪಿಗಳ ಮೇಲೆ ವಿದ್ಯಾರ್ಥಿಗಳಿಂದ ಆಡಳಿತ ಮಂಡಳಿಗೆ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ 5 ಜನರ ಮೇಲೆ ಮಮತ ಎಫ್ ಐ ಆರ್ ಮಾಡಿಸಿದ್ದಾರೆ.. ಇನ್ನು BGS ವಿರುದ್ಧ ದಾಖಲಾಗಿದ್ದ FIR ಹಿಂದೆ ನೂರೆಂಟು ಅನುಮಾನ ಮೂಡಿದ್ದು, ಮಠದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿಸಿದೆ..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments