ರಾಜ್ಯಸುದ್ದಿ

ರಾಮೇಶ್ವರ ಕೆಫೆ ಬ್ಲಾಸ್ಟ್ : ಐಸಿಸ್ ಉಗ್ರರ ಕೈವಾಡ..??

ಬೆಂಗಳೂರು : ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಸಿಸಿಬಿ ಹಾಗೂ ವೈಟ್ ಫೀಲ್ಡ್ ಪೊಲೀಸರಿಂದ ಆರೋಪಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಇನ್ನು, ಕೆಫೆಯಿಂದ ಸುಮಾರು 3 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಇರೋ ಸಿಸಿ ಕ್ಯಾಮರಾಗಳ‌ ಪರಿಶೀಲನೆ ನಡೆಸಲಾಗಿದ್ದು, ಕೆಫೆಯಿಂದ ಆರೋಪಿ ಯಾವ ಕಡೆ ಹೋದ ಅನ್ನೋದನ್ನ ಪತ್ತೆ ಹಚ್ಚಲು ಸುಮಾರು 20 ತಂಡಗಳಿಂದ ಸುಮಾರು 850ಕ್ಕೂ ಹೆಚ್ಚು ಕ್ಯಾಮರಾಗಳ ಪರಿಶೀಲನೆ ಮಾಡಿದ್ದಾರೆ.

ಅದಲ್ಲದೇ, 10 ವರ್ಷ, ಮೂರು ಬ್ಲಾಸ್ಟ್, ಮೂವರು ವ್ಯಕ್ತಿಗಳು ಪತ್ತೆಯಾಗಿದ್ದಾರೆ. 2014 ಚರ್ಚ್ ಸ್ಟ್ರೀಟ್ ಸ್ಪೋಟ ಬಾಂಬ್ ಇಟ್ಟಿದ್ದು ಒಬ್ಬನೇ ವ್ಯಕ್ತಿ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಒಬ್ಬನೆ ಬಾಂಬ್ ತೆಗೆದುಕೊಂಡು ಹೋಗುವಾಗ ಸ್ಪೋಟಗೊಂಡಿತ್ತು. ಅದೇರೀತಿಯಾಗಿ ರಾಮೇಶ್ವರ ಕೆಫೆ ಬ್ಲಾಸ್ಟ್, ಒಬ್ಬನೆ ಬಂದು ಬಾಂಬ್ ಇಟ್ಟು ಹೋಗಿದ್ದಾನೆ. ಮೂರು ಕಡೆಯೂ ಸುಧಾರಿತ ಸ್ಪೋಟವೇ ಸ್ಪೋಟಗೊಂಡಿದೆ. ಎರಡು ಕಡೆ ಐಸಿಸ್ ಕೃತ್ಯ.. ರಾಮೇಶ್ವರ ಕೆಫೆಯದ್ದು ಏನು…? ಎಂದು ಪೊಲೀಸರು ಮಾಹಿತಿಯನ್ನ ಪತ್ತೆ ಹಚ್ಚಲಿದ್ದಾರೆ.

Comments (0)

Your email address will not be published. Required fields are marked *

Back to top button