ರಾಜ್ಯ

ಮಂಗಳೂರ್ ಬ್ಲಾಸ್ಟ್ಗೂ ಬೆಂಗಳೂರ್ ಬ್ಲಾಸ್ಟ್ಗೂ ಇದೆ ಸಾಮ್ಯತೆ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ ನಾನಾ ಆಯಾಮಗಳಲ್ಲಿ ಪೊಲೀಸ್ ಟೀಮ್, ಎನ್ ಐ ಟೀಮ್, ತನಿಖೆ ನಡೆಸುತ್ತಿದೆ. ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೂ ಈಗ ನಡೆದಿರುವ ಬೆಂಗಳೂರು ಬ್ಲಾಸ್ಟ್ ಗೂ ಸಾಮ್ಯತೆ ಇದೆಯಾ ಎನ್ನುವ ಆಂಗಲ್ ನಲ್ಲಿ ತನಿಖೆ ಮುಂದುವರೆಸಲಾಗಿದೆ.

ಪೊಲೀಸ್ರು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ್ದ ಸ್ಪೋಟಕ ಸಾಮಾಗ್ರಿಗಳು, ರಾಮೇಶ್ವರಂ ಕೆಫೆಯ ಬ್ಲಾಸ್ಟ್ ನಲ್ಲಿ ಬಳಕೆ ಮಾಡಿರುವ ಸಾಮಾಗ್ರಿಗಳ ಕುರಿತು ಸಾಮ್ಯತೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ದಟ್ಟ ಹೊಗೆ ಬಂದ ರೀತಿಯಲ್ಲಿಯೇ ಬೆಂಗಳೂರು ಬ್ಲಾಸ್ಟ್ ನಡೆದ ಬಳಿಕ ಹೊಗೆ ಬಂದಿದೆ.

ಹೀಗಾಗಿ ಪರಿಶೀಲನೆ ನಡೆಸುತ್ತಿರುವ ತನಿಖಾ ತಂಡ ಕುಕ್ಕರ್ ಬ್ಲಾಸ್ಟ್ ಮತ್ತು ಕೆಫೆ ಬ್ಲಾಸ್ಟ್ ಗೂ ಸಾಮ್ಯತೆ ಇದೆ ಎಂಬ ಆಂಗಲ್ ನಲ್ಲಿ ತನಿಖೆ ನಡೆಸುತ್ತಿದೆ. ಇನ್ನು ಮಂಗಳೂರಿನ ಬ್ಲಾಸ್ಟ್ ನಲ್ಲೂ ಕೂಡ ಎರಡು ಬ್ಯಾಟರಿ, ಡಿಟೋನೇಟರ್ ಗಳು, ನಟ್ಟು, ಬೋಲ್ಟ್ ಬಳಕೆ ಮಾಡಲಾಗಿತ್ತು.

ಬೆಂಗಳೂರು ಬ್ಲಾಸ್ಟ್ ನಡೆದ ಸ್ಥಳದಲ್ಲಿಯೂ ಬ್ಯಾಟರಿ , ನಟ್ಟು ಬೋಲ್ಟ್ ದೊರಕಿವೆ. ಹೀಗಾಗಿ ಸಾಮ್ಯಾತೆ ಇರುವ ಕಾರಣ ಮಂಗಳೂರು ಸ್ಪೋಟದ ರೂವಾರಿ ಶಾರಿಕ್ ಹಾಗೂ ಟೀಮನ್ನ ವಿಚಾರಣೆಗೆ ಒಳಪಡಿಸೋಕೆ ಮುಂದಾಗಿದ್ದಾರೆ. ಸಧ್ಯ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Comments (0)

Your email address will not be published. Required fields are marked *

Back to top button