ರಾಜ್ಯಸುದ್ದಿ

ಸರ್ಕಾರಿ ಅಧಿಕಾರಿಗಳಿಗೆ ಭರ್ಜರಿ ಬಾಡೂಟ

ತುಮಕೂರು : ರಾಜ್ಯದಲ್ಲಿ ಬರಗಾಲದ ಸದ್ದು ಜೋರಾಗಿದೆ. ಈ ನಡುವೆ ಬಜೆಟ್ ಮಂಡನೆಗೂ ಮುನ್ನ ಅಧಿಕಾರಿಗಳು ಭರ್ಜರಿ ಬಾಡೂಟ ಸವಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣ ಪಂಚಾಯ್ತಿಯಲ್ಲಿ ನಡೆದಿದೆ.

ಇಂದು ಗುಬ್ಬಿ ಪಟ್ಟಣ ಪಂಚಾಯ್ತಿಯಲ್ಲಿ ಬಜೆಟ್ ಮಂಡನೆ ಇತ್ತು. ತಹಶೀಲ್ದಾರ್ ಸಿ.ಆರತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾ ದೇವಿ ನೇತೃತ್ವದಲ್ಲಿ ಬಜೆಟ್ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡ ಪಾಲ್ಗೊಂಡಿದ್ದರು. ಬಜೆಟ್ ಮಂಡನೆಗೂ ಮುನ್ನ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭರ್ಜರಿ ಬಾಡೂಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಫಿಶ್ ಕಬಾಬ್ ಖಾದ್ಯಗಳು ಗಮನ ಸೆಳೆದಿವೆ.

Comments (0)

Your email address will not be published. Required fields are marked *

Back to top button