ರಾಜಕೀಯಸುದ್ದಿ

ಪ್ರಜ್ಞಾವಂತ ಮತದಾರರಿಗೆ ಗಿಫ್ಟ್ ಆಮಿಷ..!

ಮೈಸೂರು : ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಗಿಫ್ಟ್​ ಪಾಲಿಟಿಕ್ಸ್​ ಶುರುವಾಗಿದೆ. ಮೈಸೂರಿನಲ್ಲಿ ಉದ್ಯಮಿ ವಿವೇಕಾನಂದ ಎಂಬುವವರು ಶಿಕ್ಷಕರಿಗೆ ವಾಚ್​​ ಕೊಟ್ಟು ವೋಟು ಕೇಳುವ ದೃಶ್ಯ ಫ್ರೀಡಂ ಟಿವಿಗೆ ಲಭ್ಯವಾಗಿದೆ.

ಜೂನ್​ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿವೇಕಾನಂದ ಎಂಬುವವರು ರಾಜಾರೋಷವಾಗಿ ಶಿಕ್ಷಕರಿಗೆ ವಾಚ್​ ಹಂಚಿಕೆ ಮಾಡಿದ್ದಾರೆ.

ಜೆಡಿಎಸ್ ಟಿಕೆಟ್‌ಗಾಗಿ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಮುಖಂಡ ವಿವೇಕಾನಂದ ನಡುವೆ ಪೈಪೋಟಿ ನಡೆಯುತ್ತಿದೆ. ಜೆಡಿಎಸ್‌ನಿಂದ ಗೆದ್ದಿರುವ ಮರಿತಿಬ್ಬೇಗೌಡ ಕಾಂಗ್ರೆಸ್‌ನತ್ತ ಮುಖ ಮಾಡಿರುವ ಹಿನ್ನೆಲೆ ವರಿಷ್ಠರ ಸೂಚನೆ ಮೇರೆಗೆ ಚುನಾವಣೆಗೆ ವಿವೇಕಾನಂದ ಸಜ್ಜಾಗುತ್ತಿದ್ದಾರೆ. ಮತದಾರರನ್ನು ಓಲೈಸಲು ವಾಚ್​​ ನ್ನು ಗಿಫ್ಟ್​​ ನೀಡುವ ಮೂಲಕ ಕಸರತ್ತು ನಡೆಸುತ್ತಿದ್ದಾರೆ.

https://www.youtube.com/watch?v=vWR6g0q7C6o

Comments (0)

Your email address will not be published. Required fields are marked *

Back to top button