ರಾಜ್ಯಸುದ್ದಿ

ಶಿವಮೊಗ್ಗ : ಹಾಸ್ಟೆಲ್​ ವಿದ್ಯಾರ್ಥಿಗಳೇ ಹುಷಾರ್​..!

ಶಿವಮೊಗ್ಗ : ಜಿಲ್ಲೆಯ ಗೋಪಾಳ ಗೌಡ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹಾಸ್ಟೆಲ್​ ನಲ್ಲಿ ವಿದ್ಯಾರ್ಥಿಗಳು ಮತ್ತು ಹೊರಗಿನವರ ಹಾವಳಿ ಹೆಚ್ಚಾಗಿದೆ ಎಂದು ದೂರು ಬಂದಿದೆ.

ಗಾಂಜಾ ಹಾವಳಿಯಿಂದಾಗಿ ಹಾಸ್ಟೆಲ್ ನಲ್ಲಿ ಮೂವರು ಯುವಕರಿಂದ ಗಲಾಟೆಯಾಗಿದೆ. ಹಾಸ್ಟೆಲ್ ಯುವಕ ಮಿಥುನ್ ಎಂಬುವನ ಹೆಸರು ಕೇಳಿ ಬಂದಿದೆ. ಈ ಹಾಸ್ಟೆಲ್ ನಲ್ಲಿ ಗಾಂಜಾ ಸೇವಿಸಲು ಇಲ್ಲಿನ ವಾರ್ಡನ್  ಎಂಬುವರಿಂದಲೇ ಕುಮ್ಮಕ್ಕು ದೊರೆಯುತ್ತಿದೆ ಎಂಬ ಆರೋಪವನ್ನ ಸ್ಥಳೀಯರು ಮಾಡಿದ್ದಾರೆ.

ನಿನ್ನೆ ಹಾಸ್ಟೆಲ್ ನಲ್ಲಿ ಇಬ್ಬರು ಹೊರಗಡೆಯ ಯುವಕರು ಮತ್ತು ಮಿಥುನ್ ಗಾಂಜಾ ಸೇವಿಸಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಡಿವೈಎಸ್ಪಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಇಆರ್ ಎಸ್ 112 ಪೊಲೀಸರು ಭೇಟಿ ನೀಡಿದ್ದು, ಪೊಲೀಸರು, ಹಾಸ್ಟೆಲ್ ಗೆ ದಾವಿಸಿದಾಗ ಮದ್ಯ ಸೇವನೆಯಿಂದಾಗಿ ಗಲಾಟೆಯಾಗಿರುವುದಾಗಿ ಕೇಳಿ ಬಂದಿದೆ. ಸಧ್ಯಕ್ಕೆ ಯಾವ ಯುವಕರನ್ನೂ ಬಂಧಿಸಿಲ್ಲ ಎಂಬ ಮಾಹಿತಿ ದೊರೆತಿದೆ. ಆದರೆ ವಿದ್ಯಾರ್ಥಿಗಳ ದಾಖಲಾತಿಯನ್ನ ವಶಕ್ಕೆ ಪಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಹಾಸ್ಟೆಲ್ ನ ಅಡುಗೆ ಭಟ್ಟರೂ ಸಹ ಸಾಥ್ ಇರುವುದರಿಂದ ಹಾಸ್ಟೆಲ್ ಯುವಕರಿಗೆ ಗಾಂಜಾ ಸೇವನೆಗೆ ಅವಕಾಶ ದೊರೆಯುತ್ತಿದೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.

ಠಾಣಾ ವ್ಯಾಪ್ತಿಯ ಗೊಂದಲ

ನಿನ್ನೆ ಸ್ಥಳೀಯರ ಕರೆಯ ಮೇರೆಗೆ ಹಾಸ್ಟೆಲ್ ಗೆ ತೆರಳಿದ ಪೊಲೀಸರು ಗಲಾಟೆಯನ್ನ ನಿಲ್ಲಿಸಿದ್ದಾರೆ. ಗಾಂಜಾ ಹಾವಳಿ ಹೌದಾ ಅಥವಾ ಇಲ್ಲವಾ‌ಎಂಬುದರ ಬಗ್ಗೆ ಪರೀಕ್ಷೆಗೆ ಒಳಪಡಿಸಬೇಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ವಿನೋಬ ನಗರ ಠಾಣ ವ್ಯಾಪ್ತಿಗೆ ಬರುತ್ತದೋ ಅಥವಾ ತುಂಗ ನಗರ ಠಾಣೆಗೆ ಬರುತ್ತದೋ ಎಂಬ ಗೊಂದಲ ಮುಂದುವರೆದಿದೆ. ಆದರೆ ನಿನ್ನೆ ಹಾಸ್ಟೆಲ್ ನಲ್ಲಿ ಗಾಂಜಾ ಸೇವನೆಗಾಗಿ ಹೊರಗಿನ ಯುವಕರು ಬರುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ನಿನ್ನೆ ರಾತ್ರಿ 11-30 ಕ್ಕೆ ಸಂಭವಿಸಿದೆ.

Comments (0)

Your email address will not be published. Required fields are marked *

Back to top button