ಶ್ರೀ ಅಯ್ಯಪ್ಪ ಸ್ವಾಮಿ ಕುರಿತು ಅವಹೇಳನಕಾರಿ ಪೋಸ್ಟ್ : ಅಯ್ಯಪ್ಪ ಮಾಲಾಧಾರಿಗಳ ಆಕ್ರೋಶ

ಹುಬ್ಬಳ್ಳಿ : ಸೊಸಿಯಲ್ ಮಿಡಿಯಾದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಕುರಿತು ಅವಹೇಳನ ಪೋಸ್ಟ್ ವಿಚಾರವಾಗಿ ನವಲಗುಂದ ಅಯ್ಯಪ್ಪ ಮಾಲಾಧಾರಿಗಳಿಂದ ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮೌನವಾಗಿ ಪಾದಯಾತ್ರೆಯ ಮೂಲಕ ಬಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು. ಸಿಂಧನೂರದ ಹುಚ್ಚಪ್ಪ ತೇರದಾಳ, ಜಗದೀಶ ಕಲಬುರ್ಗಿ ಕಾನೂನು ಕ್ರಮಕ್ಕೆ ಅಗ್ರಹಿಸಿದರು.

ಪೇಸ್ಬುಕ್ನಲ್ಲಿ ಅಯ್ಯಪ್ಪ ಸ್ವಾಮಿಯ ಕುರಿತು ಅವಹೇಳನ ಪೋಸ್ಟ್ ಹಾಕಿದ್ದಾರೆ. ಇಬ್ಬರು ಸೇರಿ ಶ್ರೀ ಅಯ್ಯಪ್ಪನ ಕುರಿತು ಅವಹೇಳನ ಪೋಸ್ಟ್ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇತ್ತೀಚೆಗೆ ಶ್ರೀ ಅಯ್ಯಪ್ಪಸ್ವಾಮಿ ಬಗ್ಗೆ ಅವಹೇಳನ ಪೋಸ್ಟ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಶ್ರೀ ಅಯ್ಯಪ್ಪಸ್ವಾಮಿಯ ಲಕ್ಷಾಂತರ ಭಕ್ತರಿಗೆ ತೀವ್ರ ನೋವುಂಟು ಮಾಡಿದೆ. ಇವರ ವರ್ತನೆಗೆ ಗೃಹ ಇಲಾಖೆ ಕಡಿವಾಣ ಹಾಕಬೇಕು ಹಾಗೂ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಇತಂಹ ಕಿಡಿಗೇಡಿಗಳನ್ನು ಬಂಧನ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟದ ಕಡೆ ನಾವು ಚಿಂತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.




