ರಾಜ್ಯಸುದ್ದಿ

ಬಾಲರಾಮ ವಿಗ್ರಹ ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಉಳಿ ಚಿತ್ರ ವೈರಲ್​

ಮೈಸೂರು ; ಅರುಣ್‌ ಯೋಗಿರಾಜ್ ಅವರು ಅಯೋಧ್ಯೆ ದೇವಸ್ಥಾನದ ಗರ್ಭ ಗುಡಿಯಲ್ಲಿನ ಬಾಲರಾಮ ವಿಗ್ರಹವನ್ನು ಕೆತ್ತಲು ಬಳಸಿದ ವಿಶೇಷ ಉಪಕರಣಗಳ ಚಿತ್ರವನ್ನು ಇನ್ಸ್ ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಮೆಯ “ದೈವಿಕ ಕಣ್ಣುಗಳನ್ನು ಕೆತ್ತಲು” ಬಳಸಿದ ಸುತ್ತಿಗೆ ಮತ್ತು ಉಳಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಈ ಬೆಳ್ಳಿಯ ಸುತ್ತಿಗೆ ಮತ್ತು ಚಿನ್ನದ ಉಳಿ ಬಳಸಿಕೊಂಡು ನಾನು ಅಯೋದ್ಯೆಯ ಬಾಲರಾಮ ಮೂರ್ತಿಯ ದಿವ್ಯ ಕಣ್ಣುಗಳನ್ನು ಕೆತ್ತಿದ್ದೇನೆ ಎಂದು ಯೋಗಿರಾಜ್ ಅವರು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಂಗೈಯ ಮೇಲೆ ಬೆಳ್ಳಿಯ ಸುತ್ತಿಗೆ ಇರಿಸಲಾಗಿದ್ದು ಅದರ ಪಕ್ಕದಲ್ಲಿ ತೆಳುವಾದ ಚಿನ್ನದ ಉಳಿ ಇರುವುದನ್ನು ಚಿತ್ರ ತೋರಿಸುತ್ತದೆ. ಅರುಣ್ ಯೋಗಿರಾಜ್ ಈಗ ಬೇಡಿಕೆಯ ಶಿಲ್ಪಿಯಾಗಿದ್ದಾರೆ.

Comments (0)

Your email address will not be published. Required fields are marked *

Back to top button