ಕನ್ನಡಕ್ಕೆ ಹಿಟ್ ಸಾಂಗ್ ನೀಡಿದ್ದ ಸಂಗೀತ ನಿರ್ದೇಶಕ ದೇವಾ ವಿಧಿವಶ!
Music director Deva, who delivered hit songs for Kannada cinema, has passed away!

ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದ ತಮಿಳು ಮೂಲದ ಖ್ಯಾತ ಸಂಗೀತ ನಿರ್ದೇಶಕ ದೇವಾ (75) ಇಂದು ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮಧುರ ಸಂಗೀತದ ಮೂಲಕ ಕೋಟ್ಯಂತರ ರಾಗಪ್ರಿಯರ ಹೃದಯ ಗೆದ್ದಿದ್ದ ದೇವ ಅವರ ಅಗಲಿಕೆ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಕನ್ನಡ ಸಿನಿಮಾಗಳೊಂದಿಗೆ ಆತ್ಮೀಯ ನಂಟು
ಮೂಲತಃ ತಮಿಳಿನವರಾಗಿದ್ದರೂ, ದೇವಾ ಅವರಿಗೆ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರೊಂದಿಗೆ ಭಾವನಾತ್ಮಕ ಒಡನಾಟವಿತ್ತು. ಕನ್ನಡದ ಮೇರು ನಟರಾದ ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಮೇಶ್ ಅರವಿಂದ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಕನ್ನಡದ ಅನೇಕ ಟಾಪ್ ಸ್ಟಾರ್ ನಟರ ಚಿತ್ರಗಳಿಗೆ ಅವರು ಸೂಪರ್ ಹಿಟ್ ಸಂಗೀತ ಸಂಯೋಜನೆ ಮಾಡಿದ್ದರು. ಅವರ ಸಂಗೀತ ನಿರ್ದೇಶನದ ಹಾಡುಗಳು ಆ ಕಾಲದಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು.
ದೇವಾ ಅವರು ಕನ್ನಡದ ಎವರ್ಗ್ರೀನ್ ಸಿನಿಮಾಗಳಾದ ಅಮೃತವರ್ಷಿಣಿ, ಕೋಟಿಗೊಬ್ಬ, ಸೈನಿಕ, ಸಿಂಹಾದ್ರಿ ಸಿಂಹ, ರಾಜಾ ನರಸಿಂಹ, ಕದಂಬ, ವಿಷ್ಣು ಸೇನಾ ಹಾಗೂ ಒಲವೇ ಮಂದಾರ ಸಿನಿಮಾಗಳ ಸೂಪರ್ ಹಿಟ್ ಸಾಂಗ್ಸ್ ಹಿಂದಿದ್ದ ಶಕ್ತಿ.
ಸಂಗೀತ ಲೋಕದಲ್ಲಿ ದಶಕಗಳ ಕಾಲ ತಮ್ಮ ವಿಶಿಷ್ಟ ಟ್ಯೂನ್ಗಳನ್ನು ನೀಡಿರುವ ದೇವಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.




