ವೈರಲ್ ನ್ಯೂಸ್
ಹೋಂ ವರ್ಕ್ ಮಾಡದ್ದಕ್ಕೆ ಕಪಾಳಮೋಕ್ಷ – ಕುಸಿದುಬಿದ್ದು ಬಾಲಕ ಸಾವು!
Slapped for not doing homework – Boy collapses and dies!

ಅಮರಾವತಿ : ಹೋಂ ವರ್ಕ್ ಮಾಡಲಿಲ್ಲವೆಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಬಾಲಕನಿಗೆ ಹಲ್ಲೆ ನಡೆಸಿದ ಪರಿಣಾಮ, ಆತ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 5 ವರ್ಷದ LKG ವಿದ್ಯಾರ್ಥಿ ಪ್ರಣಯ್ ತೇಜ್ ಮೃತ ಬಾಲಕ.
ಶಾಲೆಯಲ್ಲಿ ನೀಡಿದ್ದ ಹೋಂ ವರ್ಕ್ ಮಾಡಿಲ್ಲ ಎಂದು ಪ್ರಣಯ್ ಕಪಾಳಕ್ಕೆ ಶಿಕ್ಷಕಿ ಜೋರಾಗಿ ಹೊಡೆದಿದ್ದಾರೆ. ಈ ವೇಳೆ ಬಾಲಕ ಭಯದಿಂದ ಅಳುತ್ತಾ ಹೊಡಿಬೇಡಿ ಎಂದು ಕೈ ಸನ್ನೆ ಮಾಡಿದ್ದಾನೆ. ಅಳಲಿಗೆ ಕರಗದ ಶಿಕ್ಷಕಿ ಹೊಡೆದಿದ್ದು, ಕ್ಷಣಮಾತ್ರದಲ್ಲೇ ಪ್ರಜ್ಞೆ ತಪ್ಪಿ ಅದೇ ಶಿಕ್ಷಕಿಯ ಮಡಿಲಲ್ಲೇ ಕುಸಿದು ಬಿದ್ದಿದ್ದಾನೆ.
ಬಾಲಕ ಕುಸಿದು ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಸ್ಪತ್ರೆಯಲ್ಲಿ ಜಮಾಯಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.




