Ballarychamarajnagarರಾಜಕೀಯ

ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಕಾಂಗ್ರೆಸ್ ನಿರ್ನಾಮ-ಅಹಿಂದ ಡೈರೆಕ್ಟ್ ಶೂಟ್!

Siddaramaiah followers Kurubas protest against Resign

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅಹಿಂದ ಶಕ್ತಿಗಳು ಕೈ ನಾಯಕರ ವಿರುದ್ಧ ಸಿಡಿದೆದ್ದಿವೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಹಾಗೂ ಪಕ್ಷದ ನಿರ್ನಾಮಕ್ಕೆ ಕಾರಣವಾಗುವುದಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕದಿಂದ ಹೈಕಮಾಂಡ್‌ಗೆ ಅಹಿಂದ ವರ್ಗ ಖಡಕ್ ಆಗಿ ಸೂಚನೆ ನೀಡಿವೆ.

ಅಹಿಂದ ಘರ್ಜನೆ; “ಕಾಂಗ್ರೆಸ್ ನಿರ್ನಾಮ ಮಾಡ್ತೇವೆ!”


ಚಾಮರಾಜನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ರೇವಣ್ಣ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸಿದ್ದರಾಮಯ್ಯ ಅವರು ದೇಶದಲ್ಲೇ ಅತ್ಯಂತ ಮಾದರಿ ಮತ್ತು ಒಳ್ಳೆಯ ಆಡಳಿತ ನೀಡಿದ್ದಾರೆ. ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಒಂದು ವೇಳೆ ಹೈಕಮಾಂಡ್ ಒತ್ತಡ ಹಾಕಿ ರಾಜೀನಾಮೆ ಕೊಡಿಸಿದರೆ, 2028ರ ಚುನಾವಣೆಯಲ್ಲಿ ಅಹಿಂದ ಸಮುದಾಯ ಕಾಂಗ್ರೆಸ್ ಅನ್ನು ಬೆಂಬಲಿಸುವುದಿಲ್ಲ” ಎಂದು ಘೋಷಿಸಿದರು.
ಅಲ್ಲದೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೇರ ಎಚ್ಚರಿಕೆ ನೀಡಿದ ಅವರು, ರಾಜ್ಯದ ಎಲ್ಲಾ ಅಹಿಂದ ಮತಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷವನ್ನು ಕೇವಲ 28 ಸ್ಥಾನಗಳಿಗೆ ಸೀಮಿತಗೊಳಿಸುವ ಮೂಲಕ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.

ರಾಜಕೀಯ ಚಿತ್ರಣವನ್ನೇ ಬದಲಾಯಿಸ್ತೇವೆ- ಕುರುಬರ ಆಕ್ರೋಶ!
ಗಣಿ ನಗಡು ಬಳ್ಳಾರಿಯಲ್ಲೂ ಸಿಎಂ ಬದಲಾವಣೆ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಳ್ಳಾರಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಗಾದಿಲಿಂಗಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, “ಇನ್ನೆರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಮುಂದುವರಿಸಬೇಕು. ಅವರು ಬಡವರ, ದೀನದಲಿತರ ಪರ ನಿಂತ ಪ್ರಬಲ ಅಹಿಂದ ನಾಯಕ. ಅಂತಹ ನಾಯಕನನ್ನು ಹೈಕಮಾಂಡ್ ಕೆಳಗಿಳಿಸುತ್ತಿರುವುದು ಇಡೀ ರಾಜ್ಯಕ್ಕೆ ನೋವಿನ ಸಂಗತಿ” ಎಂದಿದ್ದಾರೆ., ಸಿದ್ದರಾಮಯ್ಯನವರು ಸದ್ಯ ಮೌನವಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಮತ್ತು ಅಹಿಂದ ಸಮಾಜ ಮೌನ ಮುರಿದರೆ ರಾಜ್ಯದ ರಾಜಕೀಯ ನೋಟವೇ ಬದಲಾಗಲಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಮುಸ್ಲಿಂ, ಕುರುಬ, ಎಸ್‌ಸಿ ಮತ್ತು ಎಸ್‌ಟಿ (AHINDA) ಮತಗಳು ಸಂಪೂರ್ಣವಾಗಿ ಛಿದ್ರಗೊಂಡು ಕೈ ತಪ್ಪಲಿವೆ. ಹೈಕಮಾಂಡ್ ತನ್ನ ನಿರ್ಧಾರ ಬದಲಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಅಹಿಂದ ನಾಯಕರ ಈ ಸಿಡಿತ ಈಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಭಾರಿ ನಡುಕ ಹುಟ್ಟಿಸಿದೆ.

#FreedomTV #SiddaramaiahResignation #AHINDA #Chamarajanagar #Ballari #KurubaSangha #KarnatakaPolitics #CongressHighCommand #SoniaGandhi #RahulGandhi #MallikarjunKharge #Election2028 #PoliticalCrisis #Siddaramaiah #BreakingNewsKarnataka #ಕನ್ನಡಸುದ್ದಿ #ಅಹಿಂದ_ಆಕ್ರೋಶ

Comments (0)

Your email address will not be published. Required fields are marked *

Back to top button