DAVANAGEREರಾಜಕೀಯರಾಜ್ಯಸುದ್ದಿ

ವೀರಭದ್ರೇಶ್ವರ ಸ್ವಾಮಿ ಕೊಂಡ ಹಾಯ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕುಟುಂಬ

ದಾವಣಗೆರೆ: ದಾವಣಗೆರೆ ನಗರದ ಹಳೇ ಪೇಟೆಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊಂದಿಗೆ ಭಾಗವಹಿಸಿ ಭಕ್ತಿ ಮೆರೆದಿದ್ದಾರೆ. ಉಪಚುನಾವಣೆಯ ಪ್ರಚಾರದ ಬಿರುಸಿನ ನಡುವೆಯೂ ಸಚಿವರು ತಮ್ಮ ಪುತ್ರ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮತ್ತು ಪುತ್ರಿ ಶ್ರೇಷ್ಠ ಅವರೊಂದಿಗೆ ಅಗ್ನಿಕುಂಡ ಹಾಯುವ ಮೂಲಕ ದೈವಸಂಕಲ್ಪ ಪೂರೈಸಿದರು. ಕೊಂಡೋತ್ಸವಕ್ಕೂ ಮುನ್ನ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರ ಕುಟುಂಬವು, ಕ್ಷೇತ್ರದ ಸರ್ವತೋಮುಖ ಏಳಿಗೆ ಹಾಗೂ ಚುನಾವಣೆಯಲ್ಲಿ ವಿಜಯ ದೊರೆಯಲಿ ಎಂದು ಪ್ರಾರ್ಥಿಸಿತು. ಭಕ್ತಾದಿಗಳ ಹರ್ಷೋದ್ಗಾರಗಳ ನಡುವೆ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಸಮರ್ಥ್ ಶಾಮನೂರು ಅವರ ಬೆಂಬಲಿಗರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.

Comments (0)

Your email address will not be published. Required fields are marked *

Back to top button