ಟ್ರೋಲ್‌ಗಳಿಗೆ ನಟಿ ರಶ್ಮಿಕಾ ಸೈಲೆಂಟ್ ಆನ್ಸರ್; ‘ಗರ್ಲ್‌ಫ್ರೆಂಡ್’ ಚಿತ್ರಕ್ಕೆ ಒಲಿದ ರಾಜ್ಯ ಪ್ರಶಸ್ತಿ!

ತೆಲಂಗಾಣ ರಾಜ್ಯದ ಪ್ರತಿಷ್ಠಿತ ‘ಗದ್ದರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ‘ಗರ್ಲ್‌ಫ್ರೆಂಡ್’ ಚಿತ್ರದ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕೈಯಿಂದ ಈ ಗೌರವ ಸ್ವೀಕರಿಸಿದ ರಶ್ಮಿಕಾ, ವೇದಿಕೆಯ ಮೇಲೆ ಹಳೆಯ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ವೃತ್ತಿಜೀವನದ ಆರಂಭದಿಂದಲೂ ಎದುರಿಸುತ್ತ ಬಂದಿರುವ ಟ್ರೋಲ್‌ಗಳಿಗೆ ಈ ಪ್ರಶಸ್ತಿಯೇ ಒಂದು ಸಿಹಿ ಉತ್ತರ ಎಂದು ಪರೋಕ್ಷವಾಗಿ ಸಾರಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಶ್ಮಿಕಾ, ತೆಲಂಗಾಣವನ್ನು ತಮ್ಮ ‘ಮನೆ’ ಎಂದು ಬಣ್ಣಿಸಿದರು. ಚಿತ್ರರಂಗಕ್ಕೆ ಬಂದಾಗ ತನ್ನನ್ನು ಮಗಳಂತೆ ಹರಸಿದ್ದ ಜನತೆ, ಈಗ ತನ್ನನ್ನು ಮನೆಯ ‘ಸೊಸೆ’ಯಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು
ಈ ರಾಜ್ಯ ಪ್ರಶಸ್ತಿಯು ತಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ . ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ , ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಇಂತಹ ಸದಭಿರುಚಿಯ ಸಿನಿಮಾಗಳನ್ನು ಮಾಡುವುದೇ ತಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.




