
ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ನಂತರ ಈಗ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರಿಗೆ ಡಿನ್ನರ್ ಆಯೋಜಿಸುತ್ತಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ಒಳಗಿನ ಕುರ್ಚಿ ಕಿತ್ತಾಟ ನಿಲ್ಲುತ್ತಿಲ್ಲ, ಹಾಗೆಯೇ ಡಿನ್ನರ್ ಪಾರ್ಟಿಗಳು ಮುಂದುವರಿಯುತ್ತಿವೆ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಸಂಭ್ರಮದಲ್ಲಿ ಡಿ.ಕೆ. ಶಿವಕುಮಾರ್ ಡಿನ್ನರ್ ಪಾರ್ಟಿ ಏರ್ಪಡಿಸಿದರೆ, ಅದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಇಂದು ಕಾವೇರಿ ನಿವಾಸದಲ್ಲಿ ತಮ್ಮ ಆಪ್ತ ಸಚಿವರಿಗೆ ಡಿನ್ನರ್ ಆಯೋಜಿಸಿದ್ದಾರೆ.
ಡಿ.ಕೆ. ಶಿವಕುಮಾರ್ ತಮ್ಮ ತಂಡದ ಸಭೆ ನಡೆಸಿ ಸಿದ್ದು ತಂಡಕ್ಕೆ ಸಂದೇಶ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ, ಸಿದ್ದರಾಮಯ್ಯ ತಂಡವೂ ತೆರೆಮರೆಯಲ್ಲಿ ತಮ್ಮ ಆಟ ಆರಂಭಿಸಿದ್ದು, ಈ ಮಧ್ಯೆ ಸಿಎಂ ಡಿನ್ನರ್ ಪಾರ್ಟಿ ಹೊಸ ತಿರುವು ಮೂಡಿಸಹಬಹುದು.
ಪಂಚರಾಜ್ಯ ಚುನಾವಣೆ ಮತ್ತು ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಸುರಕ್ಷಿತ ಸ್ಥಾನದಲ್ಲಿದ್ದಾರೆ. ಆದರೆ, ಡಿನ್ನರ್ ಮೀಟಿಂಗ್ ನಂತರ ಪಕ್ಷದ ಕುರ್ಚಿ ಯುದ್ಧದಲ್ಲಿ ಹೊಸ ತಿರುವುಗಳು ಆಗಬಹುದೆಂಬ ನಿರೀಕ್ಷೆ ಇದೆ.




