ರಾಜಕೀಯಸುದ್ದಿ

ಅಮೆರಿಕ–ಇರಾನ್ ಯುದ್ಧದ ಪರಿಣಾಮ; ಮಾರ್ಕೆಟ್‌ನಲ್ಲಿ ತರಕಾರಿಗಳ ವ್ಯಾಪಾರ ಕುಸಿತ

ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಈಗ ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರ್ಕೆಟ್ ವ್ಯಾಪಾರಿಗಳ ಮೇಲೂ ಬೀಳತೊಡಗಿದೆ. ಗ್ಯಾಸ್ ಸಿಲಿಂಡರ್‌ಗಳ ಅಭಾವದಿಂದ ನಗರದ ಅನೇಕ ಹೋಟೆಲ್‌ಗಳು ಬಂದ್ ಆಗಿರುವುದರಿಂದ ತರಕಾರಿ ಮತ್ತು ಹಣ್ಣುಗಳ ಖರೀದಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಕೆಆರ್ ಮಾರ್ಕೆಟ್‌ಗೆ ಪ್ರತಿದಿನ ಗೋಣಿಗಳಲ್ಲಿ ತರಲಾಗುವ ತರಕಾರಿಗಳು ಮಾರಾಟವಾಗದೆ ಹಾಗೆಯೇ ಉಳಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ್ಣು ಹಂಪಲು ಹಾಗೂ ತರಕಾರಿಗಳ ಬೆಲೆಗಳು ಇಳಿಕೆಯಾಗಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ವ್ಯಾಪಾರದಲ್ಲಿ ಭಾರೀ ಕುಸಿತ ಕಂಡುಬಂದಿದೆ.

ಎರಡು ಮೂರು ದಿನಗಳಿಂದ ತರಕಾರಿಗಳು ಮಾರಾಟವಾಗದೇ ಉಳಿದ ಕಾರಣ ವ್ಯಾಪಾರಿಗಳು ತಂದುಕೊಂಡು ಬಂದ ಮೂಟೆಗಳಲ್ಲೇ ತರಕಾರಿಗಳನ್ನು ಕಟ್ಟಿ ಕಸದ ಗಾಡಿಗಳಿಗೆ ಎಸೆಯುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಗ್ಯಾಸ್ ಸಿಲಿಂಡರ್ ಸಮಸ್ಯೆಯನ್ನು ಪರಿಹರಿಸಿ ಹೋಟೆಲ್‌ಗಳನ್ನು ಪುನರಾರಂಭಿಸಲು ಸಹಾಯ ಮಾಡಬೇಕು.

Comments (0)

Your email address will not be published. Required fields are marked *

Back to top button