ಕ್ರೈಂ ಸ್ಟೋರಿರಾಜ್ಯಸುದ್ದಿ
ಶಿಸ್ತಿನ ಹೆಸರಲ್ಲಿ ಶಾಲೆಯ ಕ್ರೌರ್ಯ…!

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಯೊಂದು ಮಾನವೀಯತೆ ಮರೆತಿದೆ . ಕೇವಲ ಎರಡು ನಿಮಿಷ ಶಾಲೆಗೆ ತಡವಾಗಿ ಬಂದ ಕಾರಣಕ್ಕಾಗಿ 6 ವರ್ಷದ ಪುಟ್ಟ ಬಾಲಕನಿಗೆ ಸುಡುವ ಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ನಿಲ್ಲಿಸಿ ಶಿಕ್ಷೆ ನೀಡಿರುವ ಘಟನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಸಂಚಾರ ದಟ್ಟಣೆಯಿಂದಾಗಿ ಮೊದಲನೇ ತರಗತಿಯ ಮಗು ಶಾಲೆಗೆ ಕೇವಲ 2 ನಿಮಿಷ ತಡವಾಗಿ ತಲುಪಿತ್ತು. ಇದನ್ನೇ ಮಹಾಪರಾಧ ಎಂಬಂತೆ ಪರಿಗಣಿಸಿದ ಶಾಲಾ ಸಿಬ್ಬಂದಿ, ಮಧ್ಯಾಹ್ನದ ಅತೀ ಹೆಚ್ಚು ಬಿಸಿಲು ಇದ್ದರೂ ಲೆಕ್ಕಿಸದೆ ಮಗುವನ್ನು ಸುಮಾರು ಎರಡು ಗಂಟೆಗಳ ಕಾಲ ಆಟದ ಮೈದಾನದಲ್ಲಿ ನಿಲ್ಲಿಸಿದ್ದಾರೆ. ತೀವ್ರವಾದ ಬಿಸಿಲಿನಿಂದಾಗಿ ಮಗು ದೈಹಿಕವಾಗಿ ಅಸ್ವಸ್ಥಗೊಂಡಿದ್ದು, ಪೋಷಕರು ಶಾಲೆಯ ಈ ಅಮಾನವೀಯ ವರ್ತನೆಯ ವಿರುದ್ಧ ಕಿಡಿಕಾರಿದ್ದಾರೆ.




