ರಾಜ್ಯಸುದ್ದಿ

ರಾಮ ಭಕ್ತರಿಂದ ಬಡವರಿಗೆ ಕಿಟ್ ವಿತರಣೆ

ಗದಗ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆಗಳು ಬಾಕಿ ಇವೆ. ಶ್ರೀರಾಮ ಮಂದಿರ ಉದ್ಘಾಟನೆ ನೆನಪಾರ್ಥವಾಗಿ ಗದಗನಲ್ಲಿ ರಾಮ ಭಕ್ತರೊಬ್ಬರು ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾರೆ. ನಗರದ ಡಾ. ಪುನಿತ್ ಬೆನಕನವಾರಿ ಎಂಬುವರು ಗುಡಿಸಲು ನಿವಾಸಿಗಳಿಗೆ, ನಿರ್ಗತಿಕರಿಗೆ, ಕಡು ಬಡವರಿಗೆ ಶ್ರೀರಾಮನ ಕಿಟ್ ನೀಡುತ್ತಿದ್ದಾರೆ.

ನೂರಾರು ಬಡ ಕುಟುಂಬಸ್ಥರಿಗೆ ಬಟ್ಟೆ, ಶ್ರೀರಾಮನ ಭಾವಚಿತ್ರ, ಶ್ರೀರಾಮರಕ್ಷಾಸ್ತೋತ್ರ, ಹನುಮಸ್ತೋತ್ರ, ಹನುಮಾನ್ ಚಾಲೀಸಾ ಪುಸ್ತಕ ಹಾಗೂ ಸನಾತನ ಕುಂಕುಮಾ, ಊದಬತ್ತಿ ಸೇರಿದಂತೆ ಹತ್ತಾರು ವಸ್ತುಗಳ ಕಿಟ್ ವಿತರಣೆ ಮಾಡಿದರು. ಇಂದಿನಿಂದ ಗುಡಿಸಲು ನಿವಾಸಿಗಳು ಶ್ರೀರಾಮನ ಜಪತಪ ಮಾಡಲಿ, ಪ್ರಭು ಶ್ರೀರಾಮ ಚಂದ್ರ ಬಡವರುನ್ನೂ ಕಾಪಡಲಿ, ಹರಿಸಿ ಆಶಿರ್ವದಿಸಲಿ, ಉನ್ನ ಸ್ಥಾನ ಹೊಂದಲಿ, ಆರ್ಥಿಕ, ಸಾಮಾಜಿಕವಾಗಿ‌ ಮುಂದೆ ಬರಲಿ ಎಂಬ ಉದ್ದೇಶದಿಂದ ಈ ಕಿಟ್ ವಿತರಣೆ ಮಾಡಲಾಗಿದೆ ಅಂತಿದ್ದಾರೆ.

 

Comments (0)

Your email address will not be published. Required fields are marked *

Back to top button