ರಾಜ್ಯಸುದ್ದಿ

ಸಹಕಾರಿ ಸಂಘಗಳ ಬಡ್ಡಿ ಮನ್ನಾ: ಸರ್ಕಾರದಿಂದ ರೈತರಿಗೆ ಗಿಫ್ಟ್ ಇದು ಫ್ರೀಡಂ ಟಿವಿಯ ಎಕ್ಸ್ ಕ್ಲ್ಯೂಸೀವ್ ಸುದ್ದಿ

ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಮದ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇದರಿಂದ 56,879 ಮಂದಿ ರೈತರ 440 ಕೋಟಿ ಮನ್ನಾ ಆಗಲಿದೆ. 2024ರ ಫೆ.20 ಒಳಗೆ ಸಂಬಂಧಪಟ್ಟ ಸಹಕರಾ ಸಂಘ ಹಾಗೂ ಬ್ಯಾಂಕ್‌ಗಳಿಗೆ ಸಂಪೂರ್ಣ ಸಾಲ ಬಾಕಿಯನ್ನು ಪಾವತಿಸಿದರೆ ಮಾತ್ರ ಮನ್ನಾ ಲಾಭ ಸಿಗಲಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.

ರಾಜ್ಯದ ಸರ್ಕಾರದ ಆದೇಶ ಆಧರಿಸಿ ಶನಿವಾರ ಎಲ್ಲಾ ಸಹಕಾರ ಬ್ಯಾಂಕ್​ಗಳಿಗೂ ಸಹಕಾರ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಇದರಲ್ಲಿ ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್​ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗಳಿಂದ ಮದ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದು ಸುಸ್ತಿಯಾಗಿರುವ ಸಾಲಗಳ ಡಿ.13 ರವರೆಗಿನ ಕಂತುಗಳನ್ನು ಫೆ.20 ರ ಒಳಗಾಗಿ ಪಾವತಿಸಿದರೆ ಅಂತಹವರ ಬಡ್ಡಿಯನ್ನು ( ಮರುಪಾವತಿ ದಿನಾಂಕದವರೆಗೆ ) ಸಂಪೂರ್ಣ ಮನ್ನಾ ಮಾಡಲಾಗುವುದು. ಈ ಬಡ್ಡಿಯನ್ನು ಸಹಕಾರ ಸಂಘಗಳಿಗೆ ಸರ್ಕಾರದಿಂದ ಭರ್ತಿ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

45 ದಿನಗಳ ಒಳಗಾಗಿ ಬಿಲ್ಲು ಸಲ್ಲಿಸಬೇಕು : ಸುಸ್ತಿ ಸಾಲಗಾರರಾಗಿರುವ ರೈತರಿಗೆ 5 ದಿನಗಳೊಳಗಾಗಿ ತಿಳಿವಳಿಕೆ ಪತ್ರ ಕಳುಹಿಸಬೇಕು. ಸಾಲ ವಸೂಲಾತಿಗೆ ನಿಗದಿಪಡಿಸಿರುವ ಫೆ.20 ದಿನಾಂಕದಿಂದ 45  ದಿನಗಳೊಳಗಾಗಿ ( ಏ.15 ರ ಒಳಗಾಗಿ ) ಬಡ್ಡಿ ಮನ್ನಾ ಬಗೆಗಿನ ಬಿಲ್ಲುಗಳನ್ನು ಪ್ರಾಥಮಿಕ ಕೃಷಿ ಮತ್ತಿನ ಸಹಕಾರ ಸಂಘ, ಲ್ಯಾಂಪ್ಸ್​, ಪಕಾರ್ಡ್​, ಬ್ಯಾಂಕ್​, ಡಿಸಿಸಿ ಬ್ಯಾಂಕ್​ ಶಾಖೆಗಳು ಸಹಕಾರ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಬಡ್ಡಿ ಮನ್ನಾಕ್ಕೆ ಎಸ್ಸಿಪಿ – ಟಿಎಸ್​​ಪಿ ಹಣ ಬಳಕೆ : ಈ ಬಡ್ಡಿ ಮನ್ನಾ ಯೋಜನೆಗೆ ತಗಲುವ ವೆಚ್ಚವನ್ನು ಸಹಕಾರ ಇಲಾಖೆಗೆ ಬಜೆಟ್​ನಲ್ಲಿ ಒದಗಿಸಿರುವ ಸಾಮಾನ್ಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ( ಎಸ್ಸಿಪಿ -ಟಿಎಸ್​​ಪಿ) ಹಣದ ಮೂಲಕ ಭರಿಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಬೆಳೆ ಸಾಲಕ್ಕೆ ಅನ್ವಯವಿಲ್ಲ ಬಡ್ಡಿ ಮನ್ನಾವು ಮದ್ಯಮಾವಧಿ ಹಾಗೂ ದೀರ್ಫಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸುಸ್ತಿ ಸಾಲಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಳೆ ಸಾಲವು ಅಲ್ಪಾವಧಿ ಸಾಲವಾಗಿದ್ದು, ಶೂನ್ಯ ಬಡ್ಡಿದರದಲ್ಲಿ ಬ್ಯಾಂಕ್​ ಗಳು ನೀಡುತ್ತವೆ. ಹೀಗಾಗಿ ಅದಕ್ಕೆ ಬಡ್ಡಿ ಮನ್ನಾ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಮಾವಧಿ ಸಾಲವನ್ನಾ 12 ತಿಂಗಳಿಂದ 36 ತಿಂಗಳಿಗೆ ಹಾಗೂ ದೀರ್ಫಾವಧಿ ಸಾಲವನ್ನು 10 ವರ್ಷದ ಅವಧಿವರೆಗೆ ನೀಡಲಾಗುತ್ತದೆ.

 

Comments (0)

Your email address will not be published. Required fields are marked *

Back to top button