ಜಿಲ್ಲೆಧರ್ಮರಾಜಕೀಯ

ಒಂದೆಡೆ ರಾಮ ಮಂದಿರ ಉದ್ಘಾಟನೆಯಿಂದ ದೂರ ಉಳಿಯಲು ಕಾಂಗ್ರೆಸ್ ನಿರ್ಧಾರ.

ಚಿಕ್ಕೊಡಿ : ಇನ್ನೊಂದೆಡೆ ರಾಮ ಮಂದಿರ ಉದ್ಘಾಟನೆ ದಿನದಂದೇ ಪಾದಯಾತ್ರೆಗೆ ಮುಂದಾದ ಕಾಂಗ್ರೆಸ್ ಶಾಸಕ. ಚಿಕ್ಕೋಡಿ ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿಯಿಂದ ಹನುಮ ಪಾದಯಾತ್ರೆ.
ಕ್ಷೇತ್ರದ ಹನುಮ ಭಕ್ತರನ್ನ ಸೇರಿಸಿ ಬೃಹತ್ ಪಾದಯಾತ್ರೆ ಮಾಡಲು ಸಜ್ಜಾದ ಕಾಂಗ್ರೆಸ್ ಶಾಸಕ.
ಯಕ್ಸಂಬಾ ಪಟ್ಟಣದ ಹನುಮಾನ್ ಮಂದಿರದಿಂದ ತೋರಣಹಳ್ಳಿಯ ಹನುಮ ಮಂದಿರದವರೆಗೆ ಪಾದಯಾತ್ರೆ ಕೈಗೊಂಡ ಶಾಸಕ.

25 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗೆ ಚಾಲನೆ ನೀಡಲು ಪಾದಯಾತ್ರೆ ಮಾಡುತ್ತಿರುವ ಶಾಸಕ. ಪಾದಯಾತ್ರೆ ನಡೆಸಿ ತೋರಣಹಳ್ಳಿಯಲ್ಲಿ ಜೀರ್ಣೋದ್ಧಾರ ಕಾಮಗಾರಿಗೆ ಪೂಜೆ ಸಲ್ಲಿಸಲಿರುವ ಶಾಸಕ. ರಾಮ ಮಂದಿರ ಉದ್ಘಾಟನೆಯ ದಿನದಂದೆ ಬೃಹತ್ ಪಾದಯಾತ್ರೆ. ಕಾಂಗ್ರೆಸ್  ನಿರ್ಧಾರದಿಂದ ರಾಮ ಭಕ್ತರಲ್ಲಿ ಅಸಮಾಧಾನ. ರಾಮ ಭಕ್ತರನ್ನ ಒಲೈಕೆ ಮಾಡಲು ಮುಂದಾದ್ರಾ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ..? ಹನುಮಾನ್ ಮಂದಿರ ಜೀರ್ಣೋದ್ಧಾರದ ನೆಪದ ಮೂಲಕ ನಾವು ರಾಮ ಭಕ್ತರೆ ಎಂದು ತೋರಿಸಲು ಪ್ಲಾನ್ ಮಾಡಿದ್ರಾ ಶಾಸಕ..?

Comments (0)

Your email address will not be published. Required fields are marked *

Back to top button