ಜಿಲ್ಲೆಸುದ್ದಿ

ಬೆಂಗಳೂರಿಗರೇ ಹುಷಾರ್..! ಕಾವೇರಿ ನೀರಲ್ಲಿ ಕಾರು ತೊಳೆದರೆ ಬೀಳುತ್ತೆ ಭಾರೀ ದಂಡ

ಶಿವರಾತ್ರಿ ಮುಗಿಯುತ್ತಿದ್ದಂತೆ ಬೇಸಿಗೆಯ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು, ಮಾರ್ಚ್ ತಿಂಗಳಿನಿಂದ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆಗಳಿದ್ದರೂ, ಈ ಬಾರಿ ಜಲಮಂಡಳಿಯು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸದ್ಯ ಕಾವೇರಿ ನೀರನ್ನು ಒದಗಿಸುವ ಕೆಆರ್‌ಎಸ್ ಅಣೆಕಟ್ಟಿನಲ್ಲಿ 54 ಟಿಎಂಸಿ ನೀರು ಲಭ್ಯವಿದ್ದು, ಜುಲೈವರೆಗೆ ನಗರಕ್ಕೆ ಕೇವಲ 14 ಟಿಎಂಸಿ ನೀರು ಸಾಕಾಗುವುದರಿಂದ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಂಭವ ಕಡಿಮೆ ಇದೆ. ಆದರೂ ಬೇಸಿಗೆಯಲ್ಲಿ ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಕುಸಿಯುವುದು ನಿಶ್ಚಿತವಾಗಿರುವುದರಿಂದ, ನೀರಿನ ಅಭಾವ ಎದುರಾಗುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳ ತಂಡ ಈಗಾಗಲೇ ಪ್ಲ್ಯಾನ್ ರೂಪಿಸಿದೆ.

ಒಂದು ವೇಳೆ ಕಾವೇರಿ ನೀರನ್ನು ಬೈಕ್ ಅಥವಾ ಕಾರು ತೊಳೆಯಲು ಮತ್ತು ಇತರ ಅನಗತ್ಯ ಕೆಲಸಗಳಿಗೆ ಬೇಕಾಬಿಟ್ಟಿ ಪೋಲು ಮಾಡುವುದು ಕಂಡುಬಂದಲ್ಲಿ ದಂಡ ವಿಧಿಸಲು ಜಲಮಂಡಳಿಯ ಬ್ಲೂಫೋರ್ಸ್ ತಂಡ ಸಜ್ಜಾಗಿದೆ. ಒಟ್ಟಿನಲ್ಲಿ ಜನರು ಜೀವಜಲವನ್ನು ಜವಾಬ್ದಾರಿಯಿಂದ ಬಳಕೆ ಮಾಡಿದರೆ ಮಾತ್ರ ಈ ಬೇಸಿಗೆಯಲ್ಲಿ ಜಲಕ್ಷಾಮದಿಂದ ಮತ್ತು ಅನಗತ್ಯ ದಂಡದಿಂದ ಪಾರಾಗಲು ಸಾಧ್ಯವಾಗುತ್ತದೆ.

Comments (0)

Your email address will not be published. Required fields are marked *

Back to top button