Top Newsಸಿನಿಮಾಸುದ್ದಿ

ಐಮ್ಯಾಕ್ಸ್ ಕಚೇರಿ ಮುಂದೆ ರಾಜಮೌಳಿ ಧರಣಿ? ಅಚ್ಚರಿಯ ನಿರ್ಧಾರ ಕೈಗೊಂಡ ಜಕ್ಕಣ್ಣ!

ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸಿನಿಮಾ ಪ್ರೇಕ್ಷಕರಿಗಾಗಿ ಹೊಸದೊಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ತಮ್ಮ ಸಿನಿಮಾಗಳಲ್ಲಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡುವ ಅವರು, ಇದೀಗ ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ಐಮ್ಯಾಕ್ಸ್ ಚಿತ್ರಮಂದಿರಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಮುಂಬರುವ ಸಿನಿಮಾವನ್ನು ಐಮ್ಯಾಕ್ಸ್ ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿರುವ ರಾಜಮೌಳಿ, ಭಾರತದಲ್ಲಿ ಅಂತರಾಷ್ಟ್ರೀಯ ಮಟ್ಟದ ಬೃಹತ್ ಪರದೆಗಳಿಲ್ಲದಿರುವುದೇ ಈ ಪ್ರತಿಭಟನೆಯ ಎಚ್ಚರಿಕೆಗೆ ಮುಖ್ಯ ಕಾರಣ ಎಂದಿದ್ದಾರೆ. ಭಾರತದಲ್ಲಿ ಐಮ್ಯಾಕ್ಸ್ ಪರದೆಗಳಿದ್ದರೂ ಅವು ಕೇವಲ 70 ಎಂಎಂಗೆ ಸೀಮಿತವಾಗಿವೆ. ವಿದೇಶಗಳಲ್ಲಿ ಇರುವಂತೆ 1.43:1 ಅಳತೆಯ ಬೃಹತ್ ಪರದೆಗಳು ಇಲ್ಲಿಲ್ಲ. ಇದರಿಂದಾಗಿ ಸಿನಿಮಾದ ದೃಶ್ಯಗಳ ಆಳ ಮತ್ತು ಎತ್ತರ ಪ್ರೇಕ್ಷಕರಿಗೆ ಸರಿಯಾಗಿ ತಲುಪುತ್ತಿಲ್ಲ. ಎತ್ತರವಾದ ಬೆಟ್ಟ ಅಥವಾ ದೃಶ್ಯಗಳನ್ನು ತೋರಿಸಿದಾಗ ಪರದೆಯ ಮಿತಿಯಿಂದಾಗಿ ಅವುಗಳ ಮೇಲ್ಭಾಗ ಕಟ್ ಆದಂತೆ ಕಾಣುತ್ತದೆ. ಇದು ಒಬ್ಬ ನಿರ್ದೇಶಕನಾಗಿ ನನಗೆ ತೃಪ್ತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಪ್ರೇಕ್ಷಕರಿಗೆ ವಿಶ್ವದರ್ಜೆಯ ದೃಶ್ಯ ವೈಭವವನ್ನು ಸವಿಯುವ ಅವಕಾಶ ಸಿಗಬೇಕು ಎನ್ನುವುದು ರಾಜಮೌಳಿ ಅವರ ಹಠ. ಇದೇ ಕಾರಣಕ್ಕೆ ಭಾರತದಲ್ಲಿ ಪೂರ್ಣ ಪ್ರಮಾಣದ ಐಮ್ಯಾಕ್ಸ್ ಸ್ಕ್ರೀನ್‌ಗಳನ್ನು ಅಳವಡಿಸುವಂತೆ ಒತ್ತಾಯಿಸಲು ತಾವು ಐಮ್ಯಾಕ್ಸ್ ಕಚೇರಿಯ ಮುಂದೆ ಧರಣಿ ಕೂರಲು ಸಿದ್ಧ ಎಂದು ಅವರು ತಮಾಷೆಯಾಗಿ ಹೇಳುತ್ತಲೇ ಗಂಭೀರವಾದ ಸಂದೇಶವೊಂದನ್ನು ರವಾನಿಸಿದ್ದಾರೆ. ತಂತ್ರಜ್ಞಾನಕ್ಕೆ ಹೆಚ್ಚಿನ ಬೆಲೆ ನೀಡುವ ಅವರ ಈ ನಿರ್ಧಾರಕ್ಕೆ ಸಿನಿಮಾ ಪ್ರೇಮಿಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.

Comments (0)

Your email address will not be published. Required fields are marked *

Back to top button