ರಾಜ್ಯಸುದ್ದಿ

ಯಶ್ ಕಟೌಟ್ ದುರಂತ ; ಮೃತರ ಕುಟುಂಬಸ್ಥರಿಗೆ ಚೆಕ್ ಹಸ್ತಾಂತರ

ಗದಗ : ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಜ. 8ರಂದು ಕಟೌಟ್ ಕಟ್ಟುವಾಗ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಮೂವರು ಯುವಕರು ದಾರುಣವಾಗಿ ಸಾವನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಮೃತ ಯುವಕರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತೆರಳಿದ್ದರು. ಇಂದು ಅವರ ಮನೆಗೆ ಯಶೋಮಾರ್ಗ ಫೌಂಡೇಷನ್ ನ ಯಶ್ ಅವರ ಸ್ನೇಹಿತರು ಕುಟುಂಬಕ್ಕೆ ಭೇಟಿ ನೀಡಿ ಮೃತಪಟ್ಟ ಮೂವರು ಯುವಕರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.

ನಂತರ ಯಶೋಪೌಂಡೇಷನ್ ನ ಯಶ್ ಆಪ್ತತರಾದ ರಾಕೇಶ್ ಹಾಗೂ ಚೇತನ್ ವಿದ್ಯುತ್ ಸ್ಪರ್ಶಿಸಿ ಗಾಯಾಳುಗಳು ಯುವಕರ ಮನೆಗೆ ಭೇಟಿ ನೀಡಿ ಅವರ ತಾಯಿಂದಿರ ಪಾಸ್ ಬುಕವನ್ನು ತೆಗೆದುಕೊಂಡು ಹೋಗಿ ಅವರಿಗೆ ಯಶ್ ಸರ್ ಜೊತೆಗೆ ಮಾತನಾಡಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದಾಗಿ ಬರವಸೆ ನೀಡಿದರು. ಯಶ್ ಸ್ನೇಹಿತರು ಆಗಮಿಸುತ್ತಿದ್ದಂತೆ ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Comments (0)

Your email address will not be published. Required fields are marked *

Back to top button