ದೇಶ/ವಿದೇಶಸುದ್ದಿ

ಬುರ್ಖಾ ಹಾಕದೆ ಹೊರಬಂದಿದ್ದಕ್ಕೆ ಪತ್ನಿ, ಇಬ್ಬರು ಮಕ್ಕಣನ್ನು ಕೊಲೆ ಮಾಡಿದ ಪಾಪಿ ಪತಿ

ಲಕ್ನೋ: ಉತ್ತರ ಪ್ರದೇಶದಲ್ಲೋಂದು ಅಮಾನವಿಯ ಘಟನೆ ನಡೆದಿದೆ.. ಬುರ್ಖಾ ಧರಿಸದೆ ಮನೆಯಿಂದ ಹೊರ ಬಂದಿದ್ದಕ್ಕೆ ಪಾಪಿ ಪತಿ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಘಟನೆ ನಡೆದಿದೆ..

ಫಾರೂಕ್​​ ಎಂಬಾತ ಮೂವರನ್ನು ಕೊಲೆ ಮಾಡಿರುವ ವ್ಯಕ್ತಿ.. ಫಾರೂಕ್​ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್​ ಮತ್ತು ಸಹ್ರೀನ್​​​​​​​ ಕಾಣೆಯಾಗಿ ಐದು ದಿನಗಳ ನಂತರ ಫಾರೂಕ್​ ತಂದೆ ದಾವೂದ್​​ ಎಫ್​ಐಆರ್​​ ದಾಖಲಿಸಿದ್ದರು. ವಿಚಾರಣೆ ವೇಳೆ ಫಾರೂಕ್​​​ ಹೇಳಿಕೆಗಳಲ್ಲಿ ಅನುಮಾನ ಮೂಡುವ ಹಾಗೇ ಇರುವುದನ್ನು ಪೊಲೀಸರು ಗಮನಿಸಿ, ಬಳಿಕ ವಿಚಾರಣೆ ನಡೆಸಿದ್ದಾರೆ..

ವಿಚಾರಣೆಯಲ್ಲಿ ಅಂತಿಮವಾಗಿ ಫಾರೂಕ್ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ, ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು, ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಅವರ ಶವಗಳನ್ನು ಅಡಗಿಸಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಪೊಲೀಸರು ಶವಗಳನ್ನು ವಶಪಡಿಸಿಕೊಂಡು, ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದರು, ಅದರಲ್ಲಿ ಸೆಕ್ಷನ್ 103 (ಕೊಲೆ) ಸೇರಿದೆ. ಬಟ್ಟೆಗಳು ಯಾರ ಜೀವಕ್ಕಿಂತ ಹೆಚ್ಚು ಅಮೂಲ್ಯವಲ್ಲ. ಈ ಕಾರಣಕ್ಕಾಗಿ ಕೊಲೆ ಮಾಡುವ ವ್ಯಕ್ತಿ ಗಂಡನಲ್ಲ, ಅವನು ಅಪರಾಧಿ ಮತ್ತು ಕಠಿಣ ಶಿಕ್ಷೆಗೆ ಅರ್ಹ ಎಂದು ನೆಟ್ಟಿಗರೊಬ್ಬರು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button