ರಾಜ್ಯಸುದ್ದಿ

ಲಾರಿ ಹರಿದು ತಂದೆ, ತಂದೆ ಮಗ ಸ್ಥಳದಲ್ಲೇ ಸಾವು

ರಾಯಚೂರು: ರಸ್ತೆ ಬದಿ ನಿಂತಿದ್ದ ಅಪ್ಪ, ಮಗನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಹೊರವಲಯದ ಯರಮರಸ್​​​ ಬೈಪಾಸ್ ಬಳಿ ನಡೆದಿದೆ..

ನಾಗಪ್ಪ ಉಪ್ಪಾರ (65) ಮತ್ತು ಪುತ್ರ ರಮೇಶ ಉಪ್ಪಾರ (38) ಮೃತ ದುರ್ದೈವಿಗಳು. ಯರಮರಸ್ ಗ್ರಾಮದ ನಾಗಪ್ಪ, ರಮೇಶ್ ರಸ್ತೆ ಬದಿ ಮೊಬೈಲ್​ನಲ್ಲಿ ಮಾತನಾಡುತ್ತ ನಿಂತಿದ್ದ ವೇಳೆ ವೇಗವಾಗಿ ಬಂದ ಲಾರಿ ಏಕಾಏಕಿ ತಂದೆ, ಮಗನ ಲಾರಿ ಹರಿದಿದ್ದರಿಂದ ಮೃತದೇಹಗಳು ಛಿದ್ರವಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Comments (0)

Your email address will not be published. Required fields are marked *

Back to top button