
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಕೆಲ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..
ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದ್ದು, ನಮಾಜ್ ಮಾಡಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.. ವಿಮಾನ ನಿಲ್ದಾಣದ ಒಳಗಡೆ ನಮಾಜ್ ಮಾಡಲು ಅನುಮತಿ ಇದ್ಯಾ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಪ್ರಶ್ನಿಸಿ ಕಿಡಿಕಾರಿದ್ದಾರೆ.
ಸರ್ಕಾರ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುತ್ತದೆ. ಆದರೆ ಅತ್ಯಂತ ಭದ್ರತಾ ಪ್ರದೇಶವಾದ ಏರ್ಪೋರ್ಟ್ನಲ್ಲಿ ನಮಾಜ್ ಮಾಡೋದು ಸರಿಯೇ?. ಆರ್ಎಸ್ಎಸ್ ಪಥಸಂಚಲನ ವಿರೋಧಿಸುವ ಸರ್ಕಾರ ನಮಾಜ್ ಮಾಡಲು ಬಿಟ್ಟಿದ್ದೇಕೆ. ಕಾಂಗ್ರೆಸ್ ನಮಾಜ್ ಮಾಡುವುದನ್ನು ಕಂಡು ಕಾಣದಂತೆ ಕುಳಿತಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.




