ರಾಜ್ಯಸುದ್ದಿ

ಸಾಲದ ಹಣವನ್ನು ವಾಪಸ್​ ಮಾಡಿಲ್ಲವೆಂದು ಸ್ನೇಹಿತನನ್ನೇ ಕೊಲೆ ಮಾಡಿದ ಆಸಾಮಿ

ಬೆಳಗಾವಿ: ಕೇವಲ 2 ಸಾವಿರ ರೂಪಾಯಿ ಸಾಲದ ಹಣಕ್ಕಾಗಿ ಯುವಕನ ಬರ್ಬರ ಹತ್ಯೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ..

ಸಾಲವಾಗಿ ಕೊಟ್ಟ ಎರಡು ಸಾವಿರ ಹಣ ಕೊಟ್ಟಿಲ್ಲವೆಂದು ಗ್ರಾಮದ ಇಬ್ಬರು ಸ್ನೇಹಿತರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ 30 ವರ್ಷದ ಮಂಜುನಾಥ್​​ ಗೌಡರ್​​ ಎಂಬುವರನ್ನು ಅವನ ಸ್ನೇಹಿತನೇ ಕೊಲೆ ಮಾಡಿದ್ದಾನೆ..

ಮಂಜುನಾಥ್ ಗೌಡರ್ ಗ್ರಾಮದಲ್ಲೇ ವಾಸಿಸುತ್ತಿದ್ದ ಯುವಕ. ಕಳೆದ ವಾರ ಅವನ ಸ್ನೇಹಿತ ದಯಾನಂದ್ ಗುಂಡ್ಲೂರ್ ಅವರಿಂದ 2 ಸಾವಿರ ರೂಪಾಯಿ ಸಾಲ ಪಡೆದಿದ್ದ. ಒಂದು ವಾರದೊಳಗೆ ಹಣ ಮರಳಿ ಕೊಡುತ್ತೇನೆ ಎಂದು ಹೇಳಿದ್ದ ಮಂಜುನಾಥ್. ಆದರೆ ಅವಧಿ ಮುಗಿದ ನಂತರ ದಯಾನಂದ್ ಹಣ ಕೇಳಲು ಮುಂದಾಗಿದ್ದ. ಇದರಿಂದ ಇಬ್ಬರ ನಡುವೆ ತೀವ್ರ ಜಗಳ ಉಂಟಾಯಿತು. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ‌ನನ್ನು ದಯಾನಂದ ಕೊಲೆ ಮಾಡಿದ್ದಾನೆ.

ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿ‌ನ ಜಾವ ಕೊಡ್ಲಿಯಿಂದ ಹೊಡೆದು ಮಂಜುನಾಥ‌ನ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಗೌಡರ ಉಸಿರು ಚಲ್ಲಿದ್ದಾನೆ. ಮಂಜುನಾಥ ಗೌಡರ ಸಾವನಪ್ಪಿರುವ ಸುದ್ದಿ ತಿಳಿದು ಪೊಲೀಸರಿಗೆ ಸ್ವಯಂ ಪ್ರೇರಿತವಾಗಿ ಹೋಗಿ ದಯಾನಂದ ಶರಣಾಗಿದ್ದಾನೆ.

Comments (0)

Your email address will not be published. Required fields are marked *

Back to top button