ರಾಜ್ಯಸುದ್ದಿ

ದರ್ಶನ್ ಅಭಿಮಾನಿಯೆಂದು ಹೇಳಿಕೊಂಡವನಿಂದ ಯುವಕನ ಮೇಲೆ ದೌರ್ಜನ್ಯ

ದಾವಣಗೆರೆ: ದರ್ಶನ್​ ಅಭಿಮಾನಿ ಎಂದು ಹೇಳಿಕೊಂಡಿರುವ ದೊಡ್ಡೇಶ್​ ಎಂಬಾತ ನೈತಿಕ ಪೊಲೀಸ್​ ಗಿರಿ ಮೆರೆದಿದ್ದು, ದರ್ಶನ್​ ಬಗ್ಗೆ ಕೆಟ್ಟದಾಗಿ ಪೋಸ್ಟ್​ ಹಾಕಿದ್ದ ಎಂದು ಆರೋಪಿಸಿ ಯುವನೊಬ್ಬನಿಗೆ ಶಿಕ್ಷೆ ನೀಡಿದ್ದಾನೆ. ದಾವಣಗೆರೆಯಲ್ಲಿ ಘಟನೆ ನಡೆದಿದೆ. ತಾನು ಯುವಕನೊಬ್ಬನಿಗೆ ಶಿಕ್ಷೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಬಲವಂತದಿಂದ ಬಸ್ಕಿ ಹೊಡೆಯುವಂತೆ ಮಾಡಿದ್ದು, ಬರಿಗೈನಲ್ಲಿ ಕರ್ಪೂರ ಹಚ್ಚಿ ದರ್ಶನ್​ರ ಕಟೌಟ್​​ಗೆ ಬೆಳಗುವಂತೆ ಆದೇಶಿಸಿದ್ದಾನೆ. ಭಯಗೊಂಡ ಯುವ ಹೇಳಿದಂತೆ ಬರಿಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಅರತಿ ಮಾಡಿದ್ದಾನೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ವಡ್ನಹಳ್ಳಿ ಗ್ರಾಮದ ಯುವಕ ಲಿಂಗರಾಜು ಎಂಬಾತ ನಟ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್​​ ಹಾಕಿದ್ದನು. ಈ ಯುವಕ ಪುನೀತ್​ ಅಭಿಮಾನಿ ಎಂದು ಹೇಳಲಾಗಿದೆ. ನಿನ್ನೆ ದಾವಣಗೆರೆ ಗೀತಾಂಜಲಿ ಥಿಯೇಟರ್ ಬಳಿ ಯುವಕನ ಬರಿಗೈಯಲ್ಲಿ ಕರ್ಪೂರ ಬೆಳಗಿಸಿ ಬಸ್ಕಿ ಹೊಡೆಸಿ ಡೊಡ್ಡೆಶ್​ ಶಿಕ್ಷೆ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ನೈತಿಕ ಪೊಲೀಸ್ ಗಿರಿಯ ವಿಡಿಯೋ ವೈರಲ್ ಆಗಿದೆ.

 

Comments (0)

Your email address will not be published. Required fields are marked *

Back to top button