Top Newsಜಿಲ್ಲೆ

ದೇವರೇ ಬಂದು ಹೇಳಿದ್ರೂ ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ; ವಿ.ಸೋಮಣ್ಣ

ತುಮಕೂರು: ಸ್ವತಃ ದೇವರೇ ಬಂದು ಹೇಳಿದ್ರೂ ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ವಿ. ಸೋಮಣ್ಣ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ.

ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿದ ಸೋಮಣ್ಣ, ಕೇಂದ್ರ ಸರ್ಕಾರದಿಂದ ರಾಜ್ಯದ  ಅಭಿವೃದ್ಧಿ ಹಾಗೂ ತುಮಕೂರು ಜಿಲ್ಲಾಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿ, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ ಸರ್ವೆ ಆಗಿದೆ.  ಡಿಪಿಆರ್ ಶುರು ಮಾಡಿಸಿದ್ದೀನಿ. ಇದರ ಜೊತೆಗೆ NH4ರ ತಿಮ್ಮರಾಜನಹಳ್ಳಿ ಅಭಿವೃದ್ಧಿ ಆಗುತ್ತದೆ. ಕೆಐಡಿಬಿಯವರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.

ಇನ್ನು 50 ವರ್ಷಕ್ಕೆ ತೊಂದರೆ ಆಗಬಾರದು. ನಾನು ಇನ್ನು 50 ವರ್ಷ ಇರ್ತೀನೇನಪ್ಪಾ.. ಇಲ್ಲ ಇರೋದಿಲ್ಲ.. ಇಂತಹ ಅಭಿವೃದ್ಧಿ ಕೆಲಸಗಳೆಲ್ಲಾ ನಮ್ಮ ರಾಜಕೀಯ ಜೀವನದಲ್ಲಿ ಹೆಜ್ಜೆ ಗುರುತು ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button