
ಧಾರವಾಡ: ಪರಿಸರಕ್ಕೆ ಹಾನಿಕಾರಕ ಪಿಓಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದರು ಕೂಡಾ ಕೆಲವು ಮೂರ್ತಿಕಾರರು,ಜಿಲ್ಲಾಡಳಿತ ಕಣ್ಣು ತಪ್ಪಿಸಿ ವಿಗ್ರಹಗಳ ತಯಾರು ಮಾಡಿದ್ದಾರೆ.ಇಂತಹ ಮೂರ್ತಿಗಳ ಖಚಿತ ಮಾಹಿತಿ ಮೇರೆಗೆ ಧಾರವಾಡದಲ್ಲಿ ಕಾರ್ಯಾಚರಣೆ ನಡೆಸಿ ಪಿಓಪಿ ವಿಶೇಷ ಕಾರ್ಯಪಡೆ ಧಾರವಾಡದ ಹೆಬ್ಬಳ್ಳಿಯಲ್ಲಿ 91 ಮೂರ್ತಿಗಳನ್ನು ಸೀಜ್ ಮಾಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ದಿವ್ಯಫ್ರಭು ಆದೇಶದಂತೆ ರಚಿಸಿದ ಕಾರ್ಯ ಪಡೆಯ ಸದಸ್ಯರಾದ ಪರಿಸರ ಇಲಾಖೆಯ ಪ್ರಾದೇಶಿಕ ಅಧಿಕಾರಿ ಜಗದೀಶ್ ಐ.ಎಚ್. ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ ಅವರ ನೇತೃತ್ವದಲ್ಲಿ ಹೆಬ್ಬಳ್ಳಿ ಗ್ರಾಮದ ಶಂಕರ ಕಂಬಾರ, ಬಸವರಾಜ ಗೂಳಪ್ಪ ಕಮ್ಮಾರ, ಬಸವರಾಜ ವಿರೂಪಾಕ್ಷಪ್ಪ ಕಮ್ಮಾರ, ಕರಿಯಪ್ಪ ಕಮ್ಮಾರ ಅವರ ಮನೆ ಮತ್ತು ದಾಸ್ತಾನದಲ್ಲಿರುವ 91 ಪಿಓಪಿ ಗಣಪತಿಗಳನ್ನು ತಪಾಸಣೆ ಮಾಡಿ, ವಶಪಡಿಸಿಕೊಂಡ ವಿಗ್ರಹಗಳನ್ನು ಗ್ರಾಮ ಪಂಚಾಯಿತಿಯ ವಶಕ್ಕೆ ನೀಡಲಾಗಿದೆ.




