Top Newsರಾಜ್ಯ

ಕಾಲ್ತುಳಿತ ಕೇಸ್ – ಸಿಎಂ, ಡಿಸಿಎಂ ಮೇಲೆ ಮತ್ತೊಂದು ದೂರು!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ, ಸರ್ಕಾರ ಹಾಗೂ ಆರ್ ಸಿ ಬಿ ವಿರುದ್ದ ಖಾಸಗಿ ದೂರು ದಾಖಲಿಸಲು, ಅತೀ ಹಿಂದುಳಿದ ಮಠಾಧೀಶರ ಒಕ್ಕೂಟ ನಿರ್ಧರಿಸಿದೆ. ಇದೇ ವಿಚಾರವಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಚಲವಾದಿ ಮಠದ ಬಸವನಾಗೇ ಶ್ರೀಗಳು, ಕುಂಬಾರ ಮಠದ ಬಸವಮೂರ್ತಿ ಶ್ರೀಗಳು ಹಾಗೂ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿಯಿಂದ ಸುದ್ದಿಗೋಷ್ಠಿ ನಡೆಸಿದ್ರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಆರ್ ಸಿ ಬಿ ಖಾಸಗಿ ಸಂಸ್ಥೆ. ಅದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಲಾಭ ಇಲ್ಲ. ಡಿಸಿಎಂ ಹೋಗಿ ಎಚ್ ಎ ಎಲ್ ವಿಮಾನ ನಿಲ್ದಾಣ ದಲ್ಲಿ ಆಟಗಾರರನ್ನು ರಿಸೀವ್ ಮಾಡುತ್ತಾರೆ. ಈ ಭ್ರಷ್ಟರಾಜಕಾರಣಿಗಳು ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ರಾ ಎಂಬ ಶಂಕೆ ಇದೆ.  ಇಲ್ಲಾ ಅಂದರೆ ಇಂಥಾ ರಿಸ್ಕ್ ತಗೋತಿರಲಿಲ್ಲ. ನಾಳೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಆರ್ ಸಿ ಬಿ ಹಾಗೂ ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಡಿಜಿ ವಿರುದ್ದ ದೂರು ನೀಡೋದಾಗಿ ಹೇಳಿದ್ರು. ಆರ್ ಸಿ ಬಿ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟಿದ್ದು ದುರದೃಷ್ಟಕರ ಅಂದ್ರು.

Comments (0)

Your email address will not be published. Required fields are marked *

Back to top button