Top Newsಮನರಂಜನೆರಾಜ್ಯ

ಕಾಂತಾರ ಶೂಟಿಂಗ್ – ಮೇಲಿಂದ ಮೇಲೆ ಅಹಿತಕರ ಘಟನೆ

ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಶುರುವಾದ ದಿನದಿಂದ ಒಂದಲ್ಲ ಒಂದು ಅವಾಂತರಗಳು ಉಂಟಾಗ್ತಿವೆ. ರಿಷಬ್ ಶೆಟ್ಟಿ ನಿರ್ದೇಶನದ ಹೊಂಬಾಳೆ ಫಿಲಮ್ಸ್ ನಿರ್ಮಾಣದ ಪ್ರತಿಷ್ಠಾತ್ಮಕ ಚಿತ್ರಕ್ಕೆ ಹೆಜ್ಜೆ ಹೆಜ್ಜೆಗೂ ಅಡೆ ತಡೆ ಉಂಟಾಗ್ತಿವೆ.

ಸಿನಿಮಾದ ಆರಂಭದಿಂದಲೂ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಒಮ್ಮೆ ಕಾಂತಾರ ಸಿನಿಮಾತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತಕ್ಕೀಡಾಗಿತ್ತು. ಬಸ್‌ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್‌ಗಳು ಗಾಯಗೊಂಡಿದ್ದರು.

ಮೇ 6ರಂದು ಕಾಂತಾರ ಸಿನಿಮಾದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್‌ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು.

ಇದೀಗ ಕಾಂತಾರ ಚಿತ್ರದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ಆಕಸ್ಮಿಕ ಸಾವು ಕಂಡಿದ್ದಾರೆ. ಮೂಲಗಳ ಪ್ರಕಾರ ರಾಕೇಶ್ ಪೂಜಾರಿ ಪಾತ್ರದ ಶೂಟಿಂಗ್ ಮುಗಿದಿತ್ತು ಎನ್ನಲಾಗಿದೆ.

ಮೇಲಿಂದ ಮೇಲೆ ಘಟಿಸುತ್ತಿರುವ ಅಹಿತಕರ ಘಟನೆಗಳನ್ನು ನೋಡಿದ್ರೆ ಕಾಂತಾರ ಸಿನಿಮಾದ ಮೇಲೆ ದೈವ ಮುನಿಸಿಕೊಂಡಿತೇ ಎಂಬ ಪ್ರಶ್ನೆಗಳು ಏಳುತ್ತವೆ.

ಒಂದೇ ವಾರದ ಅಂತರದಲ್ಲೇ ಕಾಂತಾರ ಸಿನಿಮಾದ ಇಬ್ಬರು ನಟರ ಸಾವು ಕಂಡಿದ್ದಾರೆ. ಮೇ 6ರಂದು ನಟ ಕಪಿಲ್, ಮೇ 11ರಂದು ಅಂದ್ರೆ ಇಂದು ನಸುಕಿನಜಾವ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ.

ಈ ಪ್ರಕರಣಗಳು ಚಿತ್ರತಂಡದ ದಿಗಿಲು ಹುಟ್ಟಿಸಿವೆ. ಸಂಕಷ್ಟ ನಿವಾರಣೆ ಸಲುವಾಗಿಯೇ ನಟ ನಿರ್ದೇಶಕ ರಿಷಬ್ ಶೆಟ್ಟಿ ಕಳೆದ ತಿಂಗಳು ದೈವ ಕೋಲದ ಮೊರೆ ಹೋಗಿದ್ದರು.

Comments (0)

Your email address will not be published. Required fields are marked *

Back to top button