ದೇಶ/ವಿದೇಶ

ಭಾರತದ ಬಳಿ ಸ್ನೇಹ ಹಸ್ತ ಚಾಚಿದ ಚೀನಾ..!

ನವದೆಹಲಿ: ದೊಡ್ಡಣ್ಣನಿಗೆ ಶಾಕ್​ ಕೊಡಲು ಬಲಾಢ್ಯ ಶಕ್ತಿಗಳು ಒಟ್ಟುಗೂಡುತ್ತಿವೆ. ಟ್ರಂಪ್​​​ಗೆ ಠಕ್ಕರ್ ಕೊಡಲು ಮಹಾ ಧ್ರುವೀಕರಣ ಶುರುವಾಗ್ತಿದ್ದು, ಇಷ್ಟು ದಿನ ದುಷ್ಮನ್ ಆಗಿದ್ದ ಆರ್ಥಿಕ ಶಕ್ತಿಗಳು ಒಗ್ಗಟ್ಟಿನ ಮಂತ್ರ ಪಠಿಸುವ ಸಾಧ್ಯತೆ ಇದೆ. ಇಷ್ಟು ದಿನ ನಾನು, ನನ್ನಿಷ್ಟ ಅನ್ನುತ್ತಿದ್ದ ಚೀನಾ, ಭಾರತದ ಬಳಿ ಸ್ನೇಹ ಹಸ್ತ ಚಾಚಿದ್ದು, ಬನ್ನಿ ಜೊತೆಯಾಗೋಣ ಎನ್ನುತ್ತಿದೆ.

ಭಾರತ-ಚೀನಾ ವೈರತ್ವ ಬಿಟ್ಟು ಒಂದಾಗಬೇಕು. ರಾಜತಾಂತ್ರಿಕ ಮಾತುಕತೆ ಮೂಲಕ ಎರಡೂ ದೇಶಗಳು ಒಂದಾಗಬೇಕು. ಪರಸ್ಪರರನ್ನು ಬೆಂಬಲಿಸುವುದು, ಪರಸ್ಪರರ ಜೊತೆ ಕೈಜೋಡಿಸುವುದು, ಎರಡೂ ರಾಷ್ಟ್ರಗಳ ಹಿತಾಸಕ್ತಿಗೆ ಒಳ್ಳೆಯದು. ಇದರಿಂದ ಎರಡೂ ರಾಷ್ಟ್ರಗಳ ಜನರ ಹಿತಾಸಕ್ತಿಗಳನ್ನು ರಕ್ಷಣೆ ಮಾಡಿದಂತೆ ಆಗಲಿದೆ. ಹೀಗಂತ ಚೀನಾ ವಿದೇಶಾಂಗ ಸಚಿವ ವಾಂಗ್​ ಯೀ ಹೇಳಿದ್ದಾರೆ. ಭಾರತ-ಚೀನಾ ಕೈ ಜೋಡಿಸಿದಾಗ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಪ್ರಜಾಪ್ರಭುತ್ವ ಬಲವಾಗುತ್ತೆ. ಜೊತೆಗೆ ಜಾಗತಿಕ ದಕ್ಷಿಣವೂ ಪ್ರಬಲವಾಗಿ ವೃದ್ದಿಯಾಗಲಿದೆ ಅನ್ನೋದು ಚೀನಾದ ವಾದವಾಗಿದೆ. ಹಿಂದಿನ ಅನುಭವದ ಆಧಾರದಲ್ಲಿ ಚೀನಾ ದೇಶವೂ ಭಾರತದ ಜೊತೆ ಕೆಲಸ ಮಾಡಲು ಸಿದ್ಧವಾಗಿದೆ. ಭಾರತ ಸರ್ಕಾರದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚರ್ಚೆಗೆ ಜೈ ಎಂದಿದೆ. ವಿಶ್ವದ ಆರ್ಥಿಕತೆಯಲ್ಲಿ ಭಾರತ-ಚೀನಾ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಭಾರತ-ಚೀನಾ ದೋಸ್ತಿಯಾದರೆ, ಅಮೇರಿಕಾ ಪಾರುಪತ್ಯದ ಅಂತ್ಯ ನಿಶ್ಚಿತವಾಗಿದೆ.

Comments (0)

Your email address will not be published. Required fields are marked *

Back to top button