ರಾಜ್ಯ

ಜೈಲಿನಲ್ಲಿ ಹನುಮಾನ್​ ಚಾಲೀಸ ಪಠಿಸುತ್ತಿರುವ ಪ್ರಜ್ವಲ್ ರೇವಣ್ಣ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರತಿದಿನ ಹನುಮಾನ್‌ ಚಾಲೀಸ ಪಠಿಸುತ್ತಿದ್ದಾರೆ.

ತನಗೆ ಎದುರಾಗಿರುವ ಸಂಕಷ್ಟ ನಿವಾರಣೆ ಮತ್ತು ಧೈರ್ಯ ಪ್ರಾಪ್ತಿಗೆ ದಿನವೆಲ್ಲಾ ಹನುಮಾನ್ ಚಾಲಿಸ ಪಠಿಸುತ್ತಾ ಇದ್ದಾರೆ. ಜೈಲಿನಲ್ಲೂ ದಿನಂಪ್ರತಿ ದೇವರ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಪ್ರಜ್ವಲ್ ಪ್ರತಿ ಬಾರಿಯೂ ಕೋರ್ಟ್‌ಗೆ ಬಂದಾಗ ಕೈಯಲ್ಲಿ ಒಂದು ಹನುಮಾನ್ ಚಾಲಿಸ ಪುಸ್ತಕ ಹಿಡಿದುಕೊಂಡು ಮಂತ್ರ ಪಠಣೆ ಮಾಡ್ತಾರೆ. ನ್ಯಾಯಾಧೀಶರ ಮುಂದೆ ಹಾಜರಾದಗಲೂ, ಸಂಕಷ್ಟ ನಿವಾರಣೆ ಆಗಲಿ ಅಂತ ಮನಸ್ಸಿನಲ್ಲೇ ಮಂತ್ರ ಪಠಣೆ ಮಾಡುತ್ತಿದ್ದಾರೆ.

ಇತ್ತಿಚಿಗೆ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಆರ್ಜಿ ಹೈಕೋರ್ಟ್​ ವಜಾಗೋಳಿಸಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಪ್ರಜ್ವಲ್ ಕಣ್ಣಿರು ಹಾಕಿದ್ರು.

Comments (0)

Your email address will not be published. Required fields are marked *

Back to top button