ಮನರಂಜನೆಸಿನಿಮಾ

ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಫಿಕ್ಸಾ,,? ವಿಜಯ್ ದೇವರಕೊಂಡ ಜೊತೆ ಮಂದಣ್ಣ ಮದುವೆ!

ನ್ಯಾಷನಲ್ ಕ್ರಶ್,ಕೊಡಗು ಕುವರಿ ಬಬ್ಲಿ ನಟಿ ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಬಿಸಿಬಿಸಿ ಚರ್ಚೆ ಶುರುವಾಗಿದೆ ಸ್ಯಾಂಡಲ್ ವುಡ್ ಸುಂದರಿ ಈಗಾಗ್ಲೇ ಅನಿಮಲ್ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ,ಅನಿಮಲ್ ಸಿನಿಮಾ ಬಗ್ಗೆ ಹಲವು ಮಹಿಳಾ ಪ್ರೇಕ್ಷಕರು ಆಕ್ಷೇಪ ಖಂಡನೆ ವ್ಯಕ್ತಪಡಿಸಿದ್ದರು ,ಆದರೂ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮ ಗಳಿಕೆ ಮಾಡಿದೆ. ರಶ್ಮಿಕಾ ಮಂದಣ್ಣ ಪ್ರಸ್ತುತ ಅಲ್ಲು ಅರ್ಜುನ್ ಅವರ ‘ಪುಷ್ಪ’ ದಿ ರೂಲ್’ ಚಿತ್ರೀಕರಣದಲ್ಲಿದ್ದಾರೆ. ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಮತ್ತು ಚಾವಾ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ತೊಡಗಿಸಿಕೊಂಡಿದ್ದಾರೆ ಎರಡು ಮೂರು ಸಿನಿಮಾದಲ್ಲಿ ಬ್ಯುಸಿ ಇರೋ ರಶ್ಮಿಕ ಮಂದಣ್ಣ ಫೆಬ್ರವರಿ ಎರಡನೇ ವಾರದಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಚರ್ಚೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ರಕ್ಷತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ರಶ್ಮಿಕ ಮಂದಣ್ಣ ಕಿರಿಕ್ ಪಾರ್ಟಿ ಯಶಸ್ಸಿನ ನಂತರ ಬೇರೆ ಬೇರೆ ಭಾಷೆಯಲ್ಲೂ ಬೇಡಿಕೆ ಹೆಚ್ಚಾದವು ,ತಮಿಳ್ ,ಮಲಯಾಳಂ, ತೆಲುಗು ,ಹಿಂದಿ ಚಿತ್ರಗಳಲ್ಲೂ ನಟಿಸಿ ಭೇಷ್ ಅನ್ನಿಸಿಕೊಂಡ ನಟಿ ಈ ಹಿಂದೆ ಕಿರಿಕ್ ಪಾರ್ಟಿ ನಟ ರಕ್ಷತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಅನ್ನೋ ಗುಸು ಗುಸು ಕೇಳಿಬಂದಿತ್ತು ಅದ್ರಲ್ಲೂ ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತಾರೆ ಅನ್ನೋ ವಿಚಾರವು ಪ್ರಚಾರದಲ್ಲಿತ್ತು ,ಕೊನೆಗೆ ಲವ್ ಬ್ರೇಕಪ್ ಆಗಿ ಇಬ್ಬರ ಪ್ರೇಮ ಮುರಿದು ಅಂತರ ಕಾಯ್ದುಕೊಂಡಿದ್ದು ಜಗಜ್ಜಾಹೀರು.

ಆದ್ರೀಗ ತೆಲುಗು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಸುದ್ದಿಗೆ ತೆರೆ ಬಿದ್ದಿಲ್ಲ ರಕ್ಷತ್ ಶೆಟ್ಟಿ ವಿಚಾರದಂತೇನ ಅಥವಾ ಅರೇಂಜ್ ಮ್ಯಾರೇಜ ಅಥವಾ ಇದು ಗಾಳಿ ಸುದ್ದಿನಾ ಅಂತ ಸಾಕಷ್ಟು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ ,ಆದ್ರೆ ಈವರೆಗೂ ಇಬ್ಬರೂ ಅಧಿಕೃತವಾಗಿ ಹೇಳಿಕೊಂಡಿಲ್ಲ .

ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿದೆ. ಇತ್ತೀಚೆಗೆ ರಶ್ಮಿಕಾ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದರು. ಇಬ್ಬರೂ ಒಟ್ಟಿಗೆ ವಿಹಾರಕ್ಕೆ ಹೋಗುವುದು ಸಹ ಕಂಡುಬಂದಿದೆ. ಇಬ್ಬರೂ ಸ್ನೇಹಿತರು ಅಷ್ಟೇ ಎಂದು ಹೇಳಿಕೊಂಡಿದ್ದರೂ ಅದು ಸ್ನೇಹಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವ ವರದಿಗಳು ಸಿನಿಮಾ ವಲಯದಲ್ಲಿ ಕೇಳಿಬಂದಿವೆ.

ಶ್ಚಿತಾರ್ಥದ ವಿಚಾರ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಭಾರಿ ಚರ್ಚೆಯಾಗುತ್ತಿದ್ದು, ಎಕ್ಸ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಖಷಿಯಾಗಿದ್ದಾರೆ. ಆದರೆ, ಇದೆಲ್ಲಾ ನಿಜವಾ ಅಲ್ಲವಾ ಎನ್ನುವುದನ್ನು ಸ್ವತಃ ರಶ್ಮಿಕಾ ಮತ್ತು ವಿಜಯ್ ಸ್ಪಷ್ಟಪಡಿಸಬೇಕಿದೆ.

ನಿಶ್ಚಿತಾರ್ಥದ ವಿಚಾರ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಭಾರಿ ಚರ್ಚೆಯಾಗುತ್ತಿದ್ದು, ಎಕ್ಸ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಖಷಿಯಾಗಿದ್ದಾರೆ. ಆದರೆ, ಇದೆಲ್ಲಾ ನಿಜಾನ ಸುಳ್ಳಾ ಎನ್ನುವುದನ್ನು ಸ್ವತಃ ರಶ್ಮಿಕಾ ಮತ್ತು ವಿಜಯ್ ಸ್ಪಷ್ಟಪಡಿಸಬೇಕಿದೆ.

Comments (0)

Your email address will not be published. Required fields are marked *

Back to top button