ದೇಶ/ವಿದೇಶ

ಮ್ಯಾನ್ಮಾರ್​​, ಥೈಲ್ಯಾಂಡ್​ನಲ್ಲಿ ನಡುಗಿದ ಭೂಮಿ; ಈವರೆಗೂ 1700 ಜನ ಬಲಿ

ಮ್ಯಾನ್ಮಾರ್​ನಲ್ಲಿ ನಡೆದ ಭೀಕರ ಭೂಕಂಪದಿಂದ ಜನರ ಜೀವನ ಅಸ್ತವ್ಯಸ್ಥವಾಗಿದೆ. ಗಗನಚುಂಬಿ ಕಟ್ಟಡಗಳು, ರಸ್ತೆ, ಸೇತುವೆಗಳು ಕುಸಿತದಿಂದ ಸಾವಿರಾರು ಜನರ ಜೀವನವನ್ನು ಬಲಿಪಡೆದುಕೊಂಡಿದೆ.

ಮಯನ್ಮಾರ್‌ ಮತ್ತು ಥೈಲ್ಯಾಂಡ್​ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಏರಿಕೆಯಾಗ್ತಲೇ ಇದೆ. ನಿನ್ನೆಗೆ 1500ರ ಗಡಿದಾಟಿದ್ದ ಸಾವಿನ ಸಂಖ್ಯೆ, ಸದ್ಯ 1700ರ ಗಡಿಯನ್ನೂ ದಾಟಿದೆ. ಇನ್ನೂ ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಭೂಕಂಪದಲ್ಲಿ ಸುಮಾರು 3,400ಕ್ಕೂ ಅಧಿಕ ಜನರು ಗಾಯಗೊಂಡಿದ್ದರೆ, 300ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮಯನ್ಮಾರ್​ಗೆ ಜಗತ್ತಿನೆಲ್ಲೆಡೆಯಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಭಾರತದಿಂದ ಮಯನ್ಮಾರ್‌ಗೆ ಎರಡು ಸಿ-17 ವಿಮಾನಗಳ ಮೂಲಕ ಆಹಾರ ಸಾಮಗ್ರಿ ಮತ್ತು ರಕ್ಷಣಾ ವಸ್ತುಗಳನ್ನ ತಲುಪಿಸಲಾಗಿದೆ.. ಭಾರತ, ಚೀನಾ, ಅಮೆರಿಕ ಸೇರಿದಂತೆ ಇತರೆ ದೊಡ್ಡ ದೇಶಗಳು ಬ್ಯಾಂಕಾಕ್​ಗೆ ಸಹಾಯಹಸ್ತ ನೀಡಲು ಮುಂದಾಗಿವೆ. ಸೂತಕದ ಮನೆಯಾಗಿರೋ ಬ್ಯಾಕಾಂಕ್​, ಮಯನ್ಮಾರ್​, ಥೈಲ್ಯಾಂಡ್​ನಲ್ಲಿ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ.. ಸಾವು-ನೋವಿಗೆ ಇನ್ನಾದ್ರೂ ಇತಿಶ್ರೀ ಹಾಡು ದೇವರೇ ಅಂತ ಇಡೀ ವಿಶ್ವವೇ ಪ್ರಾರ್ಥಿಸುತ್ತಿದೆ.

Comments (0)

Your email address will not be published. Required fields are marked *

Back to top button