ಮ್ಯಾನ್ಮಾರ್, ಥೈಲ್ಯಾಂಡ್ನಲ್ಲಿ ಭೂಕಂಪ; ಭಾರತೀಯರಿಗೆ ಹೆಲ್ಪ್ಲೈನ್ ಆರಂಭ

ನವದೆಹಲಿ: ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ನಲ್ಲಿ ಭೂಕಂಪ ಸಂಭವಿಸಿದ್ದು ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಇನ್ನು ಗಗನಚುಂಬಿ ಕಟ್ಟಡಗಳು ಕುಸಿದು ನೂರಾರು ಜನ ಸಿಲುಕಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲದೆ ಥೈಲ್ಯಾಂಡ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗಾಗಿ ಹೆಲ್ಪ್ಲೈನ್ ಸಹ ತೆರೆಯಲಾಗಿದೆ.
ಥಾಯ್ಲೆಂಡ್ನ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ರಿಕ್ಟರ್ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಇಲ್ಲಿ 3 ಮಂದಿ ಜೀವ ಬಿಟ್ಟಿದ್ದು 90 ಮಂದಿ ನಾಪತ್ತೆಯಾಗಿದ್ದಾರೆ. ಭೂಕಂಪದಿಂದ ಇಲ್ಲಿವರೆಗೆ 7 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜೀವ ಕಳೆದುಕೊಂಡವರ ಸಂಖ್ಯೆ 15ಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಮಯನ್ಮಾರ್, ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲಿ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಅಲ್ಲಿನ ಭಾರತೀಯರಿಗೆ ಸಮಸ್ಯೆ ಆದ್ರೆ, ತಕ್ಷಣಕ್ಕೆ ಸ್ಪಂದಿಸಲು ಸಹಾಯವಾಣಿಯನ್ನು ಇದೀಗ ತೆರೆಯಲಾಗಿದೆ. ಸಿಲುಕಿರುವ ಯಾವುದೇ ಭಾರತೀಯರು ಸಹಾಯವಾಣಿ ಮೂಲಕ ಸಂಪರ್ಕ ಮಾಡಬಹುದು.
ಥೈಲ್ಯಾಂಡ್ನಲ್ಲಿರುವ ಭಾರತೀಯರಿಗೆ ಹೆಲ್ಪ್ಲೈನ್
+66 6188 19218
ಕನ್ನಡ ಹಾಗೂ ಥಾಯ್ ಭಾಷೆಯಲ್ಲಿ ಸಹಾಯವಾಣಿ
ಮೋಹನ್- +66 899012366
ತುರ್ತು ನಂಬರ್
1669
ರಾಷ್ಟ್ರೀಯ ವಿಪತ್ತು ಎಚ್ಚರಿಕೆ ಕೇಂದ್ರದ ನಂಬರ್
02-399-4114




