ಜನಸಾಮಾನ್ಯರಿಗೆ ಬೆದರಿಕೆ ಹಾಕಿದ್ರಾ ಪ್ರಭಾವಿ ಸಚಿವ..?

ಆಧುನಿಕ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಬಳಸದೆ ಇರುವವರು ಇಲ್ಲವೇ ಇಲ್ಲ..ಕಾಮನ್ ಆಗಿ ಯಾರ್ ಪೋಸ್ಟ್‌ಗೆ ಯಾರ ಬೇಕಾದ್ರೂ ಕಾಮೆಂಟ್ ಮಾಡಬಹುದಾಗಿದೆ, ಹಾಗಂತ ನಾವು ಅದಕ್ಕೆ ರಿಪ್ಲೈ ಮಾಡಬೇಕು ಅಂತೇನಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ, ವಿವಿಧ ಮನಸ್ಥಿತಿಯ ಜನರೂ ಇರ್ತಾರೆ. ಯಾರಾದ್ರೂ ಏನಾದ್ರೂ ಪೋಸ್ಟ್ ಹಾಕಿದಾಗ ಒಳ್ಳೆಯ, ಕೆಟ್ಟ ಕಾಮೆಂಟ್ಸ್ ಬರುತ್ತವೆ. ಅದರಲ್ಲೂ ವಿಐಪಿಗಳು, ರಾಜಕಾರಣಿಗಳು, ಚಿತ್ರನಟರು, ಖ್ಯಾತನಾಮ ವ್ಯಕ್ತಿಗಳ ಪೋಸ್ಟ್‌ಗಳಿಗೆ ಹೆಚ್ಚು ಜನ ಹೇಗೆಂದರೆ ಹಾಗೆ ಕಾಮೆಂಟ್ ಮಾಡ್ತಾರೆ. ಆದರೆ ಪ್ರಜ್ಞಾವಂತರು, ಜವಾಬ್ದಾರಿಯುತ ಸ್ಥಾನದಲ್ಲಿರೋರು ಕಾಮೆಂಟ್‌ಗಳಿಗೆಲ್ಲ ಉತ್ತರಿಸುತ್ತಾ ಕೂರೋದಿಲ್ಲ. ಆದ್ರೆ ಸಚಿವ ಬೈರತಿ ಸುರೇಶ್ ಅವರು ವ್ಯಕ್ತಿಯೊಬ್ಬನಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ ಎನ್ನವ ಪೋಸ್ಟ್ ಒಂದು ವೈರಲ್ ಆಗ್ತಿದೆ.
ಸಚಿವ ಬೈರತಿ ಸುರೇಶ್ ಫೇಸ್‌ಬುಕ್‌ನಲ್ಲಿ ತಮ್ಮ ಪೋಸ್ಟ್‌ಗೆ ಕಾಮೆಂಟ್ ಮಾಡಿದ ವ್ಯಕ್ತಿಗೆ ಕೆಟ್ಟದಾಗಿ ರಿಪ್ಲೈ ಕೊಟ್ಟಿದ್ದಾರೆ ಎನ್ನುವ ಸಂದೇಶವೊಂದು ಹರಿದಾಡ್ತಿದೆ. ಅಶ್ಲೀಲ ಶಬ್ದಗಳಿಂದ ಕಾಮೆಂಟ್ ಮಾಡಿದ್ದಲ್ಲದೇ, ಹೊಡೆದು ಹಾಕ್ತೀವಿ ನಿನ್ನ ಅಂತ ಬೆದರಿಕೆ ಹಾಕಿದ್ದಾರಂತೆ!
ಆದ್ರೆ ನನ್ನ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿದೆ ಅಂತ ಖುದ್ದು ಬೈರತಿ ಸುರೇಶ್ ಮತ್ತೊಂದು ಫೇಸ್‌ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ!
ಹಾಗಿದ್ದರೆ ಸಚಿವ ಬೈರತಿ ಸುರೇಶ್ ಅವರ ಫೇಸ್ ಬುಕ್ ಅಂಕೌಟ್ ಹ್ಯಾಕ್ ಆಗಿದ್ಯಾ? ಹ್ಯಾಕ್ ಮಾಡಿದ್ದು ಯಾರು ಅನ್ನೋದು ಗೊತ್ತಾಗಬೇಕಿದೆ




