Top Newsರಾಜ್ಯಸುದ್ದಿ

ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ

ಕಾರ್ಕಳ : ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಅವರು ಕಾರ್ಕಳ ತಾಲೂಕಿನ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಪಟ್ಟಾಭಿ ರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಪ್ರಮುಖರಾದ ಸಂದೀಪ್ ಶೆಟ್ಟಿ, ಸುಧಾಕರ ಹೆಗ್ಡೆ, ಪ್ರಶಾಂತ್ ಶೆಟ್ಟಿ, ದಿಲೀಪ್ ಶೆಟ್ಟಿ, ತಂತ್ರಿಗಳಾದ ವರದರಾಜ್ ತಂತ್ರಿ, ಹರಿಶ್ಚಂದ್ರ ರಾವ್, ರವಿಶಾಸ್ತ್ರಿ ಕುಟುಂಬಸ್ಥರಾದ ವಾದಿರಾಜ ಪೆಜತ್ತಾಯ ಉಪಸ್ಥಿತರಿದ್ದರು. ಸದ್ಯ ದೇವಸ್ಥಾನದ ಜೀರ್ಣೋದ್ಧಾರ ದೇವಸ್ಥಾನದ ರಸ್ತೆಯಲ್ಲಿ ಸ್ವಾಗತ ಗೋಪುರ ಕಟ್ಟಸಿಕೊಡುಮಂತೆ ಮನವಿ ಮಾಡಲಾಯಿತು.

Comments (0)

Your email address will not be published. Required fields are marked *

Back to top button